ಮಂಗಳೂರಿನಲ್ಲಿ ನಡೆದ ಮಿಸೆಸ್‌ ಇಂಡಿಯಾ ಕರ್ನಾಟಕ ಸೌಂದರ್ಯ ಸ್ಪರ್ಧೆಯಲ್ಲಿ ಮಿಸೆಸ್‌ ಇಂಡಿಯಾ ಕರ್ನಾಟಕ-2026 ಕಿರೀಟವನ್ನು ಪಡೆದ ಲಕ್ಷ್ಮೀ ಅಶೋಕ್‌. 
ಜಿಲ್ಲೆ

ಲಕ್ಷ್ಮೀ ಮುಡಿಗೆ ‘ಮಿಸೆಸ್‌ ಇಂಡಿಯಾ ಕರ್ನಾಟಕ ಕಿರೀಟ’ PUTTUR

ನಿಶಾಂತ ಎನ್ ಬಿಲ್ಲಂಪದವು
ಪುತ್ತೂರು: ಮಂಗಳೂರು ಬೋಳೂರು ಬೇಯಲ್ಲಿ ಪಾಥ್‌ವೇ ಎಂಟರ್‌ಪ್ರೆೃಸಸ್‌ ಹಾಗೂ ಮರ್ಸಿ ಬ್ಯೂಟಿ ಅಕಾಡೆಮಿ ಸಹಯೋಗದಲ್ಲಿ ನಡೆದ ಏಳನೇ ಆವೃತ್ತಿಯ ಮಿಸೆಸ್‌ ಇಂಡಿಯಾ ಕರ್ನಾಟಕ ಸೌಂದರ್ಯ ಸ್ಪರ್ಧೆಯಲ್ಲಿ ಲಕ್ಷ್ಮೀ ಅಶೋಕ್‌ ‘ಮಿಸೆಸ್‌ ಇಂಡಿಯಾ ಕರ್ನಾಟಕ 2026' ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಡಾ.ನಿಶಿತಾ ಶೆಟ್ಟಿಯಾನ್‌, ಡಾ.ರಶ್ಮಾ ಶೆಟ್ಟಿ, ವಿದ್ಯಾ ಸಂಪತ್‌ ಕರ್ಕೇರ ಪ್ರಮುಖ ತೀರ್ಪುಗಾರರಾಗಿದ್ದರು. ಮಿಸೆಸ್‌ ಇಂಡಿಯಾ ಕರ್ನಾಟಕ ನಿರ್ದೇಶಕರಾದ ದೀಪಕ್‌ ಗಂಗೂಲಿ, ಮರ್ಸಿ ವೀಣಾ ಡಿಸೋಜ, ಸಹ ನಿರ್ದೇಶಕರಾದ ಅನೀಶಾ ಅಂಜಲಿನ್‌, ಟ್ರೈನರ್‌ ರಕ್ಷಿತಾ ನಾಯರ್‌ ಉಪಸ್ಥಿತರಿದ್ದರು.
ವಿಶಿಷ್ಟ ಸಾಧನೆ: ರೈತನ ಮಗಳಾಗಿ, ಗೃಹಿಣಿಯಾಗಿ ಹಳ್ಳಿಯಲ್ಲೇ ಕೃಷಿ ಜೀವನ ನಡೆಸಿಕೊಂಡೀರುವ ಲಕ್ಷ್ಮೀ ಅಶೋಕ್‌ ಗ್ರಾಮಿಣ ಭಾಗದ ಶಾಲೆಯಲ್ಲಿ ಕಲಿತು ರಾಜ್ಯಮಟ್ಟದಲ್ಲಿ ಹಲವು ಸವಾಲುಗಳ ನಡುವೆ ವಿಜಯಿಯಾಗಿದ್ದಾರೆ. ಸದ್ಯ ವಿಟ್ಲ ಸಮೀಪದ ಮಿತ್ತೂರು ಅಡ್ಕತ್ತಿಮಾರು ಎಂಬಲ್ಲಿ ವಾಸವಾಗಿದ್ದಾರೆ. ಕ್ಯಾಂಪ್ಕೊ ಸಂಸ್ಥಾಪಕ ವಾರಣಾಸಿ ಸುಬ್ರಾಯ ಭಟ್‌ ಮೊಮ್ಮಗಳು, ವಾರಣಾಸಿ ಡಾ.ಕೃಷ್ಣಮೂರ್ತಿ ಹಾಗೂ ಅಶ್ವಿನಿ ಕೃಷ್ಣಮೂರ್ತಿ ದಂಪತಿ ಪುತ್ರಿ. ಮುಂದೆ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಪತ್ರಿಕೋದ್ಯಮ ಮಾಡಿರುವ ಅವರು ಕವಿತೆಗಳನ್ನು ರಚಿಸುತ್ತಾರೆ.
"

ಬಾಲ್ಯದಿಂದಲೇ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಬೇಕೆಂಬುದು ಕನಸಾಗಿತ್ತು. ಸದ್ಯ ಹಳ್ಳಿ ಜೀವನದಲ್ಲಿ ತೊಡಗಿಸಿಕೊಂಡಿದ್ದು, ಮಕ್ಕಳಾದ ಬಳಿಕವೂ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ತಿಳಿಯಿತು. ಸಣ್ಣಮಟ್ಟದಲ್ಲಾದರೂ ಸಾಧನೆ ಮಾಡಬೇಕೆಂಬ ನಿಟ್ಟಿನಲ್ಲಿ ಭಾಗವಹಿಸಿ ವಿಜಯಿಯಾಗಿದ್ದು, ಕೆಲವೇ ತಿಂಗಳಲ್ಲಿ ನಡೆಯಲಿರುವ ರಾಷ್ಟ್ರೀಯಮಟ್ಟದ ಸ್ಪರ್ಧೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ.

— ಲಕ್ಷ್ಮೀ ಅಶೋಕ್‌ ಮಿಸ್ಸೆಸ್‌ ಇಂಡಿಯಾ ಕರ್ನಾಟಕ