ಪುತ್ತೂರು: ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸಬೇಕೆಂಬ ನೀತಿಯಂತೆ ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜಿಗಾಗಿ ದಶಕದಿಂದ ಹೋರಾಟ ನಡೆಯುತ್ತಿದೆ. ಅಽವೇಶನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿಕೊಳ್ಳಲಾಗಿತ್ತು. ಮಾ.೭ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸುತ್ತಿರುವ ಮುಂಗಡ ಪತ್ರದಲ್ಲಿ ಪುತ್ತೂರಿನ ಜನರ ಬೇಡಿಕೆಗೆ ಬೆಲೆ ಸಿಗುತ್ತದೆಯೋ ಅಥವಾ ಮರೀಚಿಕೆಯಾಗಿಯೇ ಉಳಿಯಲಿದೆಯಾ ಎಂಬ ಪ್ರಶ್ನೆ ಮೂಡಿದೆ.
ಬಳಕೆದಾರರ ಹಿತರಕ್ಷಣಾ ವೇದಿಕೆ ಪುತ್ತೂರು ಹಾಗೂ ಇತರ ಸಂಘಟನೆ ನೇತೃತ್ವದಲ್ಲಿ ೨೦೧೪-೧೫ನೇ ಸಾಲಿನಲ್ಲಿ ಮೆಡಿಕಲ್ ಕಾಲೇಜು ಬೇಡಿಕೆಯ ಅಭಿಯಾನಕ್ಕೆ ಚಾಲನೆ ನೀಡಿತ್ತು. ಪ್ರತಿ ಪಂಚಾಯಿತಿ, ಸಂಘಟನೆಗಳಲ್ಲಿ ನಿರ್ಣಯ ಮಾಡಿ ಜನರಲ್ಲಿ ಜಾಗೃತಿ ಮೂಡಿಸಲು ಕೇಳಿಕೊಂಡಿತ್ತು. ಶಕುಂತಳಾ ಟಿ. ಶೆಟ್ಟಿ ಶಾಸಕರಾಗಿದ್ದ ಸಂದರ್ಭದಲ್ಲಿ ನಿವೇಶನ ಕಾಯ್ದಿರಿಸಿ, ಪಹಣಿ ಮಾಡುವ ಕೆಲಸವಾಗಿತ್ತು. ಆ ಬಳಿಕ ಬಂದ ಜನಪ್ರತಿನಿಽಗಳು ಹೆಚ್ಚಿನ ಆಸಕ್ತಿ ವಹಿಸದ ಕಾರಣದಿಂದ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ಹುಟ್ಟಿಕೊಂಡಿದೆ.
ಹೋರಾಟ ಸಮಿತಿಯಿಂದ ಸಹಿ ಸಂಗ್ರಹ ಅಭಿಯಾನ ನಡೆದು ೫ ಸಾವಿರಕ್ಕೂ ಅಽಕ ಜನರ ಅಭಿಪ್ರಾಯ ಸಂಗ್ರಹಿಸಿ ಸರ್ಕಾರಕ್ಕೆ ಕಳುಹಿಸಿದ್ದರು. ಆಡಳಿತಾತ್ಮಕ ಪ್ರಕ್ರಿಯೆಗಳನ್ನು ನಡೆಸಬೇಕಾದ ಜನಪ್ರತಿನಿಽಗಳು ನೇರವಾಗಿ ಕೊನೆಯ ಹಂತಕ್ಕೆ ಹೋಗುತ್ತಿರುವುದರಿಂದ ಪ್ರತಿಬಾರಿಯೂ ವೈದ್ಯಕೀಯ ಕಾಲೇಜು ವಿಚಾರದ ಹೋರಾಟಗಳು ಮುಗ್ಗರಿಸುತ್ತಿದೆ. ಕರಾವಳಿಯ ಅಭಿವೃದ್ಧಿಗೆ ಸರ್ಕಾರಗಳು ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ ಎಂಬ ಆರೋಪಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಉತ್ತರ ನೀಡಲಿದೆಯಾ ಎಂಬ ಕುತೂಹಲ ಜನರಲ್ಲಿ ಮೂಡಿಸಿದೆ.
ಅಽವೇಶನದಲ್ಲಿ ಉತ್ತರ
ಕಳೆದ ಜುಲೈನಲ್ಲಿ ನಡೆದ ಅಽವೇಶನದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯ ಬಗ್ಗೆ ಸರ್ಕಾರದ ನಿಲುವೇನು? ಎಂಬ ಪ್ರಶ್ನೆಯನ್ನು ಎತ್ತಿದ್ದರು. ವೈದ್ಯಕೀಯ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ಉತ್ತರಿಸಿ, ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸುಮಾರು ೬೧೦ ಕೋಟಿ ರೂ. ಅನಾವರ್ತಕ ವೆಚ್ಚ ಹಾಗೂ ೬೦ ಕೋಟಿ ರೂ. ಅವರ್ತಕ ವೆಚ್ಚ ಅವಶ್ಯಕತೆ ಇದೆ. ಅನುದಾನದ ಲಭ್ಯತೆಯ ಆಧಾರದಲ್ಲಿ ಜಿಲ್ಲೆಯಲ್ಲಿ ಕಾಲೇಜು ಪ್ರಾರಂಭಿಸಲು ಪರಿಶೀಲಿಸಲಾಗುವುದು. ಸದ್ಯ ಪುತ್ತೂರು ತಾಲೂಕಿನಲ್ಲಿ ಕಾಲೇಜು ಸ್ಥಾಪನೆಯ ಪ್ರಸ್ತಾವನೆ ಸರ್ಕಾರದ ಹಂತದಲ್ಲಿ ಇಲ್ಲ ಎಂದು ಉತ್ತರ ನೀಡಿದ್ದರು.
ಬಜೆಟ್‌ಗೂ ಮುನ್ನ ಭೇಟಿ!
ಮೆಡಿಕಲ್ ಕಾಲೇಜು ಹೋರಾಟ ಸಮಿತಿಯ ಪದಾಽಕಾರಿಗಳು ಪುತ್ತೂರಿನಿಂದ ಬೆಂಗಳೂರಿಗೆ ತೆರಳಿದ್ದು, ಶುಕ್ರವಾರ ೧೦ ಗಂಟೆಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಹಕ್ಕೊತ್ತಾಯ ಮಾಡಲಿದ್ದಾರೆ. ಕೊನೆಯ ಹಂತದಲ್ಲಿ ಮಾಡುವ ಬೇಡಿಕೆ ಬಜೆಟ್‌ನ ಮೇಲೆ ಎಷ್ಟು ಪರಿಣಾಮಕಾರಿಯಾಗಲಿದೆ ಎಂಬ ಪ್ರಶ್ನೆ ಮೂಡಿದೆ. ಪುತ್ತೂರಿಗೆ ೫೦೦ ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುದಾನ ನೀಡುವ ಸಾಧ್ಯತೆಯಿದೆ ಎಂಬ ರೀತಿಯಲ್ಲಿ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದೇ ಕಾರಣದಿಂದ ಪುತ್ತೂರಿನ ತಂಡ ಮುಖ್ಯಮಂತ್ರಿಗಳನ್ನು ಅಭಿನಂದಿಸುವುದಕ್ಕೆ ತೆರಳುತ್ತಿದೆ ಎಂಬ ಮಾತೂ ಕೇಳಿಬಂದಿದೆ.
ಹಾಸನ, ಚಿಕ್ಕಮಂಗಳೂರು, ಮಡಿಕೇರಿ ಬಳಿಕ ಮಂಗಳೂರಿನ ತನಕ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಸೌಲಭ್ಯ, ವೈದ್ಯಕೀಯ ಕಾಲೇಜಿಲ್ಲ. ಮಂಗಳೂರಿನ ಮೇಲಿನ ಅವಲಂಬನೆ ನಿವಾರಿಸಲು ವಿಕೇಂದ್ರೀಕೃತ ಅಭಿವೃದ್ಧಿಗೆ ಪೂರಕವಾಗಿ ನಾಲ್ಕು ತಾಲೂಕುಗಳಿಗೆ ಪೂರಕವಾಗಿ ಕೇಂದ್ರ ಸ್ಥಾನದಂತಿರುವ ಪುತ್ತೂರು ಉತ್ತಮ ಆಯ್ಕೆ. ೨೦೨೫-೨೬ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಪುತ್ತೂರು ಸರ್ಕಾರಿ ಆಸ್ಪತ್ರೆಯ ಸಾಮರ್ಥ್ಯ ಹೆಚ್ಚಳಕ್ಕೆ ಹಣಕಾಸು ನೆರವು ಹಾಗೂ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರಾತಿ ಸಿಗಲಿ ಎಂಬ ಆಶಯ.
| ದಿನೇಶ್ ಭಟ್ ಪುತ್ತೂರು
ಸಾಮಾಜಿಕ ಹೋರಾಟಗಾರರು