ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಭೇಟಿ ನೀಡಿದ ಶಾಸಕ ಅಶೋಕ್ ಕುಮಾರ್ ರೈ ವಿಶೇಷ ಪ್ರಾರ್ಥನೆ ಸಲ್ಲಿಸಿ ನವಗ್ರಹ ಪ್ರತಿಷ್ಠಾಪನೆಯ ಪ್ರಸಾದ ಸ್ವೀಕರಿಸಿದರು. 
ಜಿಲ್ಲೆ

ನವಗ್ರಹ ಗುಡಿ, ಅಯ್ಯಪ್ಪ ಬಾಲಾಲಯ ಪ್ರತಿಷ್ಠಾಪನೆ TEMPLE

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಪುತ್ತೂರು ಮಹಾಲಿಂಗೇಶ್ವರ ದೇವಳದಲ್ಲಿ ವಿಧಿ ವಿಧಾನ
ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ದೇವಳದ ಬಳಿಯ ವಾಸುಕಿ ನಾಗಸನ್ನಿಧಿಯಿಂದ ಮೂಲ ನಾಗಸನ್ನಿಧಿಯಲ್ಲಿ ಪ್ರತಿಷ್ಠಾಪನೆ, ನವಗ್ರಹ ಗುಡಿ ಮತ್ತು ಅಯ್ಯಪ್ಪ ವಿಗ್ರಹದ ಬಾಲಾಲಯ ಪ್ರತಿಷ್ಠಾಪನೆ ಕಾರ್ಯ ತಂತ್ರಿಗಳಾದ ಕುಂಟಾರು ರವೀಶ ತಂತ್ರಿ ನೇತೃತ್ವದಲ್ಲಿ ನಡೆಯಿತು.
ಬೆಳಗ್ಗೆ ಗಣಪತಿ ಹೋಮ ನೆರವೇರಿಸಿ ಮೂಲನಾಗ ಸನ್ನಿಧಿಯಲ್ಲಿ ಪ್ರತಿಷ್ಠಾಪನೆ ಕಾರ್ಯ ನಡೆಯಿತು. ಶಾರದಾ ಭಜನಾ ಮಂದಿರದ ಬಾಲಾಲಯದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ದೇವಳದ ಒಳಾಂಗಣದಲ್ಲಿ ನವಗ್ರಹ ವಿಗ್ರಹಗಳ ಪ್ರತಿಷ್ಠಾಪನೆ ನಡೆಯಿತು. ಮಧ್ಯಾಹ್ನ ಮೂಲ ನಾಗಸನ್ನಿಧಿಯಲ್ಲಿ ಆಶ್ಲೇಷಬಲಿ ಪೂಜೆ, ವಟು ಆರಾಧನೆ ನಡೆಯಿತು. ಶಾಸಕ ಅಶೋಕ್ ಕುಮಾರ್ ರೈ ದೇವಳದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ಕುಂಟಾರು ಗುರುತಂತ್ರಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ದಿನೇಶ್ ಪಿ.ವಿ., ನಳಿನಿ ಪಿ.ಶೆಟ್ಟಿ, ಈಶ್ವರ ಬೆಡೇಕರ್, ಸುಭಾಶ್ ರೈ ಬೆಳ್ಳಿಪ್ಪಾಡಿ, ಕೃಷ್ಣವೇಣಿ, ವಿನಯ ಸುವರ್ಣ, ದೇವಳದ ಪ್ರಧಾನ ಅರ್ಚಕ ವಸಂತ ಕೆದಿಲಾಯ, ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.
"

ಕೆರೆಯ ಅಭಿವೃದ್ಧಿ ೩ನೇ ಬಾರಿಗೆ ಟೆಂಡರ್ ಕರೆಯಲಾಗಿದೆ. ೩.೫ ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯಲಿದ್ದು ಅದಕ್ಕೂ ಮೊದಲು ಯುಜಿಡಿ ಪೈಪ್‌ಲೈನ್ ಅಳವಡಿಸಲಾಗುತ್ತದೆ. ಬೊಳುವಾರು ಕಡೆಯಿಂದ ಎಲ್ಲ ಒಳಚರಂಡಿ ನೀರು ಹೋಗುವಂತೆ ಪೈಪ್‌ಲೈನ್ ಮಾಡಲಾಗುವುದು. ಮಹಾಲಿಂಗೇಶ್ವರ ದೇವರ ಸ್ವರ್ಣಕವಚ ನಿರ್ಮಾಣಕ್ಕೆ ಈವರೆಗೆ ೧೬೦ ಗ್ರಾಂ ಚಿನ್ನ ಬಂದಿದ್ದು, ಡಿಸೆಂಬರ್ ಒಳಗೆ ೧ ಕೆ.ಜಿ. ಚಿನ್ನ ಬರುವ ನಿರೀಕ್ಷೆಯಿದೆ.

— ಅಶೋಕ್ ಕುಮಾರ್ ರೈ, ಶಾಸಕ