ಪುತ್ತೂರು: ಶೀಘ್ರ ಮಳೆ ಪ್ರಾಪ್ತಿಗಾಗಿ ಪುತ್ತೂರಿನ ಶ್ರೀಮಹಾಲಿಂಗೇಶ್ವರ ದೇವಳದಲ್ಲಿ ಪುತ್ತೂರು ಶಾಸಕ ಅಶೋಕ್‌ಕುಮಾರ್ ರೈ ಸೂಚನೆಯಂತೆ ಪರ್ಜನ್ಯ ಜಪ ನಡೆಯಿತು.
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಮಳೆ ಇಲ್ಲದೆ ಬಿಸಿಲ ತಾಪ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಜನ ಬಿಸಿಲಿಗೆ ಕಂಗೆಟ್ಟು ಮನೆಯಿಂದ ಹೊರಗೆ ಬರಲಾರದ ಸ್ಥಿತಿ ಇದೆ. ಕ್ಷೇತ್ರದ ಕೆಲವು ಕಡೆಗಳಲ್ಲಿ ಕುಡಿಯುವ ನೀರಿಗೂ ಅಭಾವ ಉಂಟಾಗಿದ್ದು, ಮಳೆ ಬಂದು ಜನರ ಸಂಕಷ್ಟ ದೂರವಾಗಿ ಎಲ್ಲರಿಗೂ ಸಂತುಷ್ಟಿ ಲಭಿಸಲಿ ಎಂದು ಪ್ರಾರ್ಥಿಸಿದರು.
ಸಹಕಾರಿ ದುರೀಣ ಪಂಜಿಗುಡ್ಡೆ ಈಶ್ವರ ಭಟ್, ನ್ಯಾಯವಾದಿ ಜಗನ್ನಿವಾಸ್ ರಾವ್, ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್, ಗುತ್ತಿಗೆದಾರ ರಂಜಿತ್ ಬಂಗೇರ ಉಪಸ್ಥಿತರಿದ್ದರು.