ನಾವೀನ್ಯತೆ ಮತ್ತು ತಂತ್ರಜ್ಞಾನ ಪ್ರಗತಿ ಪ್ರಶಸ್ತಿ 
ಜಿಲ್ಲೆ

ಮೊಟ್ಟೆತ್ತಡ್ಕ ಗೇರು ಸಂಶೋಧನಾಲಯಕ್ಕೆ ಪ್ರಶಸ್ತಿ PUTTUR

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ನವೀನ ತಂತ್ರಜ್ಞಾನ ಅಭಿವೃದ್ಧಿಗೆ ಅತ್ಯುತ್ತಮ ಕೊಡುಗೆ
ಪುತ್ತೂರು: ಬೆಂಗಳೂರು ಕೈಗಾರಿಕಾ ಮತ್ತು ವಾಣಿಜ್ಯ ಮಂಡಳಿ (ಬಿಸಿಐಸಿ)ಯಲ್ಲಿ ನಡೆದ ೨೦೨೬ರ ಕೃಷಿ-ಆಹಾರ ಸಂಸ್ಕರಣಾ ಪ್ರಶಸ್ತಿಗಳ ಮೊದಲ ಆವೃತ್ತಿಯಲ್ಲಿ ಮೊಟ್ಟೆತ್ತಡ್ಕದ ಐಸಿಎಆರ್-ಗೇರು ಸಂಶೋಧನಾ ನಿರ್ದೇಶನಾಲಯ (ಐಸಿಎಆರ್-ಡಿಸಿಆರ್) ‘ನಾವೀನ್ಯತೆ ಮತ್ತು ತಂತ್ರಜ್ಞಾನ ಪ್ರಗತಿ ಪ್ರಶಸ್ತಿ’ಯನ್ನು ಪಡೆದುಕೊಂಡಿದೆ.
ರೈತರು ಮತ್ತು ಉದ್ಯಮಿಗಳಿಗೆ ಹೊಸ ಜೀವನೋಪಾಯದ ಅವಕಾಶಗಳ ಸೃಷ್ಟಿ, ನಷ್ಟವನ್ನು ಕಡಿಮೆ ಮಾಡಿ ಹೆಚ್ಚಿನ ಇಳುವರಿ ನೀಡುವ ಗೇರು ಪ್ರಭೇದಗಳು, ಉತ್ಪಾದನೆ ಮತ್ತು ಸಂಸ್ಕರಣೆಗಾಗಿ ಯಾಂತ್ರೀಕರಣ ತಂತ್ರಜ್ಞಾನಗಳು, ಗೇರು ಹಣ್ಣಿನ ಬಳಕೆಗೆ ನವೀನ ಮೌಲ್ಯವಧಿತ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಐಸಿಎಆರ್-ಡಿಸಿಆರ್ ಮನ್ನಣೆಯನ್ನು ನೀಡಿದೆ. ಈ ಮೂಲಕ ಭಾರತದ ಗೇರು ವಲಯವನ್ನು ಪರಿವರ್ತಿಸುವ ಸಾಮರ್ಥ್ಯದೊಂದಿಗೆ ನವೀನ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ಪುತ್ತೂರು ನಿರ್ದೇಶನಾಲಯ ನೀಡಿದ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಪ್ರಶಸ್ತಿ ಪ್ರಶಸ್ತಿ ನೀಡಲಾಗಿದೆ.
"

ವಿಜ್ಞಾನ ಆಧಾರಿತ ನಾವೀನ್ಯತೆಗಳ ಮೂಲಕ ಭಾರತದ ಗೇರು ಮೌಲ್ಯ ಸರಪಳಿಯನ್ನು ಬಲಪಡಿಸುವಲ್ಲಿ ಸಂಸ್ಥೆಯ ವಿಜ್ಞಾನಿಗಳು ಮತ್ತು ಸಿಬ್ಬಂದಿ, ಉದ್ಯಮ ಪಾಲುದಾರರು ಮತ್ತು ಪಾಲುದಾರರ ಪ್ರಯತ್ನಗಳಿಗೆ ಪ್ರಶಸ್ತಿ ಸಾಕ್ಷಿಯಾಗಿದೆ.

— ಜೆ.ದಿನಕರ ಅಡಿಗ, ಐಸಿಎಆರ್-ಡಿಸಿಆರ್ ನಿರ್ದೇಶಕ