ಪುತ್ತೂರು: ಹೂವಿನ ಮಾರುಕಟ್ಟೆ ಮುಂಭಾಗದಲ್ಲಿ ಎರಡು ತಂಡಗಳ ನಡುವೆ ಗುರುವಾರ ರಾತ್ರಿ ಹೊಡೆದಾಟ ನಡೆದಿದ್ದು, ರಸ್ತೆಯಲ್ಲೇ ಈ ಘಟನೆ ನಡೆದ ಹಿನ್ನಲೆಯಲ್ಲಿ ಕೆಲವು ಸಮಯ ವಾಹನ ಸಂಚಾರಕ್ಕೆ ಸಮಸ್ಯೆಯುಂಟಾಯಿತು.
ಪುತ್ತೂರು ಕೋಟಿಚೆನ್ನಯ ಬಸ್ ನಿಲ್ದಾಣದ ಕೆಳಗಿನ ಗಾಂಧಿಕಟ್ಟೆ ಸಮೀಪ ಹಣ್ಣು ಹಂಪಲು ವಿತರಣೆ ಪಿಕಪ್ ವಾಹನದವರು ಮತ್ತು ಮಾರುತಿ ೮೦೦ ಕಾರಿನವರ ನಡುವೆ ನಡುರಸ್ತೆಯಲ್ಲೇ ಹೊಡೆದಾಟ ನಡೆದಿದೆ.
ಎರಡೂ ಬಣಗಳು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು, ಹೊಡೆದಾಟದ ಕಾರಣವನ್ನು ಬಹಿರಂಗ ಪಡಿಸಿಲ್ಲ. ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿರುವುದನ್ನು ಗಮನಿಸಿ ಸ್ಥಳೀಯ ಅಂಗಡಿಯವರು ಎಚ್ಚರಿಕೆ ಕೊಟ್ಟ ನಂತರ ಎರಡು ತಂಡಗಳು ಅಲ್ಲಿಂದ ತೆರಳಿದೆ.
ಗುರುವಾರ ರಾತ್ರಿ ೮.೪೫ ಸಮಯಕ್ಕೆ ಮುಖ್ಯ ಪೇಟೆಯಲ್ಲೇ ಹೊಡೆದಾಟ ನಡೆದರು ಪೊಲೀಸರ ಪತ್ತೆಯೇ ಇರಲಿಲ್ಲ ಎಂಬ ಆರೋಪ ಸಾರ್ವಜನಿಕರ ವಲಯದಿಂದ ಕೇಳಿ ಬಂದಿದ್ದು, ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.