ಸಮಿತಿ ಅಧ್ಯಕ್ಷ ಸದಾನಂದ ನಾಗಪ್ಪ ನಾಯ್ಕ ಹಾಗೂ ಸದಸ್ಯಕಾರ್ಯದರ್ಶಿ ಶ್ವೇತಾ ಜೆ. ಅವರು ಜಿಲ್ಲಾ ಪಂಚಾಯಿತಿಯ ವಸತಿನಿಲಯಗಳಿಗೆ ಭೇಟಿ ನೀಡಿದರು.
- ಓದಿಗೆ ಸಮಸ್ಯೆಯಾಗದಂತೆ ಕ್ರಮಕ್ಕೆ ಸೂಚನೆ
ಪುತ್ತೂರು: ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಸದಾನಂದ ನಾಗಪ್ಪ ನಾಯ್ಕ, ಸದಸ್ಯಕಾರ್ಯದರ್ಶಿ ಶ್ವೇತಾ ಜೆ. ಅವರು ಜಿಲ್ಲಾ ಪಂಚಾಯಿತಿಯ ವಸತಿನಿಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಒದಗಿಸುತ್ತಿರುವ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿ, ವಿದ್ಯಾರ್ಥಿಗಳಿಂದ ಸಮಸ್ಯೆಗಳ ಮಾಹಿತಿ ಪಡೆದರು.
ಹಾರಾಡಿ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ವಾರ್ಡನ್ ಅನುಪಸ್ಥಿತಿ ಇದ್ದು, ಸಹಾಯಕಿ ಹಾಗೂ ಅಡುಗೆಯವರಿದ್ದರು. ವಾರಾಂತ್ಯದ ಕಾರಣ ತರಕಾರಿಗಳ ಕೊರತೆ ಕಂಡುಬಂತು. ಬನ್ನೂರು ಶ್ರೀ ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ ವಾರ್ಡನ್ ಮೇಲ್ವಿಚಾರಕರೊಂದಿಗೆ ಮಾತುಕತೆ ನಡೆಸಿ ಮಕ್ಕಳ ಓದಿಗೆ ಸಮಸ್ಯೆಯಾಗದಂತೆ ವಿದ್ಯುತ್ ಇಲ್ಲದಿರುವಾಗ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದರು. ಕೊಂಬೆಟ್ಟು ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ, ಪುತ್ತೂರು ತಾಲೂಕು ದಾಸ್ತಾನು ಕೊಠಡಿ ಪರಿಶೀಲಿಸಿ ಊಟೋಪಚಾರದ ಬಗ್ಗೆ ಮಕ್ಕಳಿಂದ ಮಾಹಿತಿ ಪಡೆದರು.