ಜಿಲ್ಲೆ

ನಾಗೇಶ್ ಪ್ರಭು ರಾಜೀನಾಮೆ ?

Mangaluru - Nishantha Narayana

ಪುತ್ತೂರು: ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಾಗೇಶ್ ಪ್ರಭು ರಾಜೀನಾಮೆ ಸಲ್ಲಿಸಿದ್ದು, ಪಕ್ಷ ಇದನ್ನು ಅಂಗೀಕರಿಸಿಲ್ಲ ಎನ್ನಲಾಗಿದೆ.

ಪಕ್ಷದ ಪದಾಧಿಕಾರಿಗಳ ಗಮನಕ್ಕೆ ಬಾರದೆ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿರುವ ಕಾರಣದಿಂದ ಬೇಸತ್ತು ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಗ್ಗೆ ಮಾತುಗಳು ಕೇಳಿಬರುತ್ತಿದೆ. ವಾರದ ಹಿಂದೆ ರಾಜೀನಾಮೆ ಪತ್ರ ನೀಡಿರುವ ಬಗ್ಗೆ ಪಕ್ಷದ ಅಧಿಕೃತ ಮೂಲಗಳು ಖಚಿತ ಪಡಿಸಿದೆಯಾದರೂ ಈ ಬಗ್ಗೆ ನಗರ ಅಧ್ಯಕ್ಷ ಶಿವಕುಮಾರ್ ರಾಜೀನಾಮೆ ನೀಡಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ನಾಗೇಶ್ ಪ್ರಭು ಖಚಿತ ಮಾಹಿತಿ ನೀಡುವುದಕ್ಕೆ ಮಾಧ್ಯಮ ಸಂಪರ್ಕಕ್ಕೆ ಸಿಗುತ್ತಿಲ್ಲ.

ವಿಧಾನಸಭಾ ಚುನಾವಣೆ ಸಂದರ್ಭದಿಂದ ಪ್ರಾರಂಭವಾದ ಗೊಂದಲ ಇನ್ನೂ ತೆರೆ ಕಾಣದೆ, ಕಗ್ಗಂಟಾಗಿ ಮುಂದುವರಿದಿರುವುದು ಪಕ್ಷವನ್ನು ಮುಜುಗರಕ್ಕೀಡು ಮಾಡಿದೆ. ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲವೆಂಬುದಕ್ಕೆ ಕೆಲವು ದಿನಗಳ ಹಿಂದೆ ನಡೆದ ಸುದ್ದಿಗೋಷ್ಠಿಯೂ ಸಾಕ್ಷಿಯಾಗಿತ್ತು. ಇನ್ನಷ್ಟು ಮಂದಿ ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದ್ದು, ಪುತ್ತೂರು ಬಿಜೆಪಿ ನಾವಿಕನಿಲ್ಲದ ದೋಣಿಯಂತಾಗಿದೆ.