oppo_2 
ಜಿಲ್ಲೆ

ಪುತ್ತೂರಿನಲ್ಲಿ 537 ಪ್ರಕರಣ ಇತ್ಯರ್ಥ - 2,33,05,782ರೂ. ಪರಿಹಾರ ವಿತರಿಸಲು ಆದೇಶ

Mangaluru - Nishantha Narayana


ಪುತ್ತೂರು: ಲೋಕ ಅದಾಲತ್ ಮೂಲಕ ವ್ಯಾಜ್ಯಪೂರ್ವ ಮತ್ತು ನ್ಯಾಯಾಲಯದಲ್ಲಿ ಬಾಕಿ ಇರುವ ಒಟ್ಟು 1,185 ಪ್ರಕರಣಗಳ ಪೈಕಿ 537 ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಫಲಾನುಭವಿಗಳಿಗೆ 2,33,05,782ರೂ. ಪರಿಹಾರ ವಿತರಿಸಲು ಆದೇಶಿಸಲಾಗಿದೆ.


ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಽÃಶೆ ಸರಿತಾ ಡಿ ಅವರ ನ್ಯಾಯಾಲಯದಲ್ಲಿ 51 ಪ್ರಕರಣಗಳಲ್ಲಿ 17 ಇತ್ಯರ್ಥಗೊಂಡಿದ್ದು, 54,68,770 ರೂ. ಪರಿಹಾರ ವಿತರಣೆಗೆ ಆದೇಶ ಆಗಿದೆ.
ಪುತ್ತೂರು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಽÃಶ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಽಕಾರಿ ಪ್ರಿಯ ರವಿ ಜೋಗಲೇಕರ್ ಅವರ ನ್ಯಾಯಾಲಯದಲ್ಲಿ 127 ಪ್ರಕರಣಗಳಲ್ಲಿ 54 ಇತ್ಯರ್ಥಗೊಂಡಿದ್ದು, 36,57,000 ರೂ. ಪರಿಹಾರ ವಿತರಣೆಗೆ ಆದೇಶ ಆಗಿದೆ.
ಅಪರ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಽÃಶೆ ಮತ್ತು ಜೆಎಮ್‌ಎಫ್‌ಸಿಯೂ ಆಗಿರುವ ಪ್ರಿಯಾ ಜೋವಲೆಕರ್ ಅವರ ನ್ಯಾಯಾಲಯದಲ್ಲಿ 158 ಪ್ರಕರಣಗಳಲ್ಲಿ 63 ಪ್ರಕರಣ ಇತ್ಯರ್ಥಗೊಂಡಿದ್ದು, 72,79,800 ರೂ. ವಿತರಣೆಗೆ ಆದೇಶ ಆಗಿದೆ.
ಪ್ರಧಾನ ಸಿವಿಲ್ ನ್ಯಾಯಾಲಯ, ಜೆಎಮ್‌ಎಫ್‌ಸಿ ನ್ಯಾಯಾಽÃಶೆ ಅರ್ಚನಾ ಕೆ ಉನ್ನಿತಾನ್ ಅವರ ನ್ಯಾಯಾಲಯದಲ್ಲಿ 300 ಪ್ರಕರಣಗಳಲ್ಲಿ 38 ಪ್ರಕರಣಗಳು ಇತ್ಯರ್ಥಗೊಂಡಿದ್ದು, 52,44,934 ರೂ. ವಿತರಣೆಗೆ ಆದೇಶ ಆಗಿದೆ.
ಅಪರ ಸಿವಿಲ್ ನ್ಯಾಯಾಽÃಶ ಮತ್ತು ಜೆಎಮ್‌ಎಫ್‌ಸಿ ಶಿವಣ್ಣ ಹೆಚ್.ಆರ್ ಅವರ ನ್ಯಾಯಾಲಯದಲ್ಲಿ 318ಪ್ರಕರಣಗಳಲ್ಲಿ 185 ಇತ್ಯರ್ಥಗೊಂಡಿದ್ದು, 26,850 ರೂ. ವಿತರಣೆಗೆ ಆದೇಶ ಆಗಿದೆ.
2ನೇ ಹೆಚ್ಚುವರಿ ಸಿವಿಲ್ ನ್ಯಾಯಾಽÃಶ ಮತ್ತು ಜೆಎಮ್‌ಎಫ್‌ಸಿ ಯೋಗೇಂದ್ರ ಶೆಟ್ಟಿ ಅವರ ನ್ಯಾಯಾಲಯದಲ್ಲಿ 231 ಪ್ರಕರಣಗಳಲ್ಲಿ 180 ಪ್ರಕರಣ ಇತ್ಯರ್ಥಗೊಂಡಿದ್ದು, 16, 28,428ರೂ. ವಿತರಣೆಗೆ ಆದೇಶ ಆಗಿದೆ.


ಪ್ರಕರಣಗಳ ಇತ್ಯರ್ಥಕ್ಕೆ ವಕೀಲರಾದ ಅಶ್ವಿನಿ ರೈ, ಚಂದ್ರಾವತಿ ಸಿ.ಟಿ, ಮಿಥುನ್ ರೈ, ಸುಶ್ಮಿತಾ, ರಾಜೇಶ್ವರಿ ಆಚಾರ್ಯ ಸಹಕರಿಸಿದರು. ಜನನ ಮರಣ ನೋಂದಾವಣೆ ಸಹಿತ ಚೆಕ್ ಬೌನ್ಸ್, ವಿಮಾ ಹಣದ ಪ್ರಕರಣ, ಬ್ಯಾಂಕ್ ಹಾಗೂ ಇತರ ಕಂಪನಿಗಳೊAದಿಗೆ ಇರುವ ವ್ಯಾಜ್ಯಗಳನ್ನು ಇತ್ಯರ್ಥ ಮಾಡುವ ಪ್ರಯತ್ನ ನಡೆಯಿತು.