ಜಿಲ್ಲೆ

ಬಿಜೆಪಿ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಪುತ್ತಿಲ ಪರಿವಾರದ ಮುಖಂಡ ಡಾ. ಸುರೇಶ್ ಪುತ್ತೂರಾಯ..!

Mangaluru - Nishantha Narayana

ಪುತ್ತೂರು: ವಿಧಾನಸಭಾ ಚುನಾವಣೆ ವೇಳೆ ಅರುಣ್ ಪುತ್ತಿಲ ಜತೆ ಗುರುತಿಸಿಕೊಂಡು, ಪುತ್ತೂರಿನ 3ನೇ ರಾಜಕೀಯ ಶಕ್ತಿಯಾಗಿ ಕಾಣಿಸಿಕೊಳ್ಳುತ್ತಿರುವ ಪುತ್ತಿಲ ಪರಿವಾರದ ಸಕ್ರಿಯವಾಗಿ ಕಾಣಿಸಿಕೊಂಡ ಪುತ್ತೂರಿನ ಖ್ಯಾತ ವೈದ್ಯ ಡಾ. ಸುರೇಶ್ ಪುತ್ತೂರಾಯ ತಮ್ಮ ರಾಜಕೀಯ ನಡೆ ಬದಲಾಯಿಸಿದ್ದಾರೆ.

ಪುತ್ತೂರು ನಗರ ಸಭೆಗೆ ತೆರವಾದ ಎರಡು ಸ್ಥಾನಗಳಿಗೆ ಡಿ.27 ರಂದು ಉಪ ಚುನಾವಣೆ ನಿಗದಿಯಾಗಿದ್ದು, ವಾರ್ಡ್ 1 ಕ್ಕೆ ಸುನೀತಾ ಹಾಗೂ ವಾರ್ಡ 11ಕ್ಕೆ ರಮೇಶ್ ರೈಯವರು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮೊದಲು ಶುಕ್ರವಾರ ಬೆಳಿಗ್ಗೆ ಪುತ್ತೂರು ಶ್ರೀ ಮಹಾಲೀಂಗೇಶ್ವರ ದೇವಸ್ಥಾನದಲ್ಲಿ ಅಭ್ಯರ್ಥಿಗಳು ಹಾಗೂ ಬಿಜೆಪಿ ಮುಖಂಡರು ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಅಲ್ಲಿಗೆ ಆಗಮಿಸಿದ ಡಾ. ಪುತ್ತೂರಾಯರು ಇಬ್ಬರು ಅಭ್ಯರ್ಥಿಗಳಿಗೆ ಶುಭ ಹಾರೈಸಿದರು.

ಡಾ. ಸುರೇಶ್ ಪುತ್ತೂರಾಯರ ಅಚ್ಚರಿಯ ನಡೆಗೆ ಕಾರಣವೇನು ಎಂದು ತಿಳಿದು ಬಂದಿಲ್ಲ. ಪುತ್ತಿಲ ಪರಿವಾರದ ಘೋಷಣೆಯ ಸಂದರ್ಭದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಸುರೇಶ್ ಪುತ್ತೂರಾಯ ಸಕ್ರಿಯವಾಗಿ ಕಾಣಿಸಿಕೊಂಡಿದ್ದರು.

ಶುಕ್ರವಾರ ಬೆಳಗ್ಗೆ ಕುದ್ದು ಅರುಣ್ ಕುಮಾರ ಪುತ್ತಿಲ ಹಾಗೂ ರಾಜಾರಾಮ ಭಟ್ ಅವರು ಡಾ. ಪುತ್ತೂರಾಯ ಅವರ ಮುಂದೆ ಹೋಗಿ ಸಂದಾನ ಮಾತುಕತೆಗೆ ಕುಳಿತ್ತಿದ್ದರು. ಆದರೂ ಇದಕ್ಕೆ ಒಪ್ಪದ್ದು ಯಾಕೆ ಎಂಬುದು ಅನುಮಾನ ಮೂಡಿಸಿದೆ.

ಜೆಪಿಗರ ಆಹ್ವಾನದ ಹಿನ್ನೆಲೆಯಲ್ಲಿ ಡಾ. ಸುರೇಶ್ ಪುತ್ತೂರಾಯ ತೆರಳಿದ್ದಾರೆನ್ನಲಾಗಿದೆ. ಇದೇ ರೀತಿಯಲ್ಲಿ ಬಿಜೆಪಿ ಪಾಳಯದಿಂದ ಭಾಸ್ಕರ ಹಿಂದಾರು ಅವರಿಗೂ ನಾಮಪತ್ರ ಸಲ್ಲಿಕೆಯ ಸಂದರ್ಭ ಅಧಿಕೃತ ಆಹ್ವಾನ ಹೋಗಿದ್ದು, ಈಗಲೇ ನಿರ್ಧಾರ ಪ್ರಕಟಿಸುವುದಿಲ್ಲ ಎಂದು ಹೇಳಿದ್ದಾರೆಂಬ ಮಾಹಿತಿಗಳು ಕೇಳಿ ಬರುತ್ತಿದೆ.

ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲ ಅದ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಹಿರಿಯ ಬಿಜೆಪಿ ಮುಖಮಡರಾದ ಚನಿಲ ತಿಮ್ಮಪ್ಪ ಶೆಟ್ಟಿ, ಜೀವಂಧರ್ ಜೈನ್, ದಿನೇಶ್ ಜೈನ್, ರಾಮದಾಸ ಹಾರಾಡಿ ಮುಂತಾದವರು ಇದ್ದರು,ಬಳಿಕ ಬಿಜೆಪಿ ಅಭ್ಯರ್ತಿಗಳು ಹಾಗೂ ಬಿಜೆಪಿ ಮುಖಂಡರು ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು.