ವಿಟ್ಲ: ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಬಳಿಯೇ ಯುವಕನಿಂದ ಚೂರಿ ಇರಿತಕ್ಕೊಳಕ್ಕಾಗಿ ಹತ್ಯೆಯಾದ ಕುದ್ದುಪದವು ಆದಾಳ ನಿವಾಸಿ ಗೌರಿ ಮಣಿಯಾಣಿ ಮನೆಗೆ ಪುತ್ತಿಲ ಪರಿವಾರ ಭೇಟಿ ನೀಡಿ ದುಃಖತಪ್ತ ಹೆತ್ತವರಿಗೆ ಹಾಗೂ ಕುಟುಂಬ ವರ್ಗಕ್ಕೆ ಸಾಂತ್ವನ ತಿಳಿಸಿದೆ.
ಈ ಯುವಕ 2 ವರ್ಷದ ಹಿಂದೆಯೇ ಗೌರಿಗೆ ತೊಂದರೆ ಕೊಟ್ಟ ಬಗ್ಗೆ ಠಾಣೆಯಲ್ಲಿ ಕೇಸ್ ಕೊಟ್ಟಿದ್ದರೂ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಯುವತಿ ಕೆಲಸ ಮಾಡುತ್ತಿದ್ದಲ್ಲಿಗೆ ಹಲವು ಕಡೆ ಹೋಗಿ ಆರೋಪಿ ಯುವಕ ತೊಂದರೆ ಕೊಡುತ್ತಿದ್ದ. ಮುಂದೆಯೂ ಈತನಿಂದ ನಮ್ಮ ಕುಟುಂಬಕ್ಕೆ ತೊಂದರೆಯಿದೆ ಎಂದು ಹೆತ್ತವರು ಈ ಸಂದರ್ಭ ಹೇಳಿದರು.
ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಕುಟುಂಬದ ಆಧಾರ ಸ್ತಂಭವಾಗಿದ್ದ ಯುವತಿ ಹತ್ಯೆಯಿಂದ ಬಡ ಕುಟುಂಬ ನೊಂದಿದ್ದು ಸರ್ಕಾರ ಸೂಕ್ತ ಪರಿಹಾರ ಘೋಷಿಸಬೇಕೆಂದು ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಪೊಲೀಸ್ ವರಿಷ್ಠಾಧಿಕಾರಿಯವರಲ್ಲಿ ಮಾತನಾಡಿ ಹೇಳಿದರು.
ಪುತ್ತಿಲ ಪರಿವಾರದ ಪ್ರಮುಖರಾದ ರಘುನಾಥ ಶೆಟ್ಟಿ, ಅನಿಲ್ ತೆಂಕಿಲ, ಶ್ರೀಕೃಷ್ಣ ವಿಟ್ಲ, ಶರತ್ ಜೊತೆಗಿದ್ದರು.