ಮೂಡುಬಿದಿರೆ: ದೇವಾಲಯ, ದೈವಸ್ಥಾನ, ನಾಗಸ್ಥಾನಗಳು ಜಿಲ್ಲೆಯ ಶಕ್ತಿಕೇಂದ್ರಗಳು. ನಮ್ಮ ಸಾಂಸ್ಕೃತಿ ಮೂಲ ಬೇರುಗಳಾಗಿವೆ. ನಮ್ಮ ಆಂತರಿಕ ಮತ್ತು ಬಾಹ್ಯ ಬೆಳವಣಿಗೆಯಾದರೂ ಮೂಲವನ್ನು ಮರೆಯಬಾರದು. ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರದಂತಹ ಸತ್ಕಾರ್ಯಗಳನ್ನು ಮಾಡಬೇಕು ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಚೌಟರ ಅರಮನೆಯ ಕುಲದೀಪ ಎಂ.ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಧಾರ್ಮಿಕ ಉಪನ್ಯಾಸ ನೀಡಿದರು. ಕಡಂದಲೆ ಪರಾರಿ ಕೆ.ಪಿ.ಸಂತೋಷ್ ಶೆಟ್ಟಿ, ಉದ್ಯಮಿ ನಂದಕುಮಾರ್ ಕುಡ್ವ, ಮೂಡಾ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್, ಬೊಕ್ಕಸ ಚಂದ್ರಶೇಖರ್ ರಾವ್, ಶ್ರೀ ಕ್ಷೇತ್ರ ಕಟೀಲಿನ ಹರಿನಾರಾಯಣ ಆಸ್ರಣ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಉದ್ಯಮಿ ಪ್ರವೀಣ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಇಂದು ಎಂ.ಉಪಸ್ಥಿತರಿದ್ದರು. ಉಪನ್ಯಾಸಕ ರಾಮ್‌ಪ್ರಸಾದ್ ಕಾಂಚೋಡು ನಿರೂಪಿಸಿದರು.