ಜಿಲ್ಲೆ

ಇಸ್ಕಾನ್ ಅಡುಗೆ ಕೋಣೆ ಉದ್ಘಾಟಿಸಿದ ಪುತ್ತಿಗೆ ಶ್ರೀ

Mangaluru - Hariprasad Rai


ಮಂಗಳೂರು : ಮಂಗಳೂರಿನಲ್ಲಿ ಇಸ್ಕಾನ್ ವತಿಯಿಂದ ನೂತನವಾಗಿ ನಿರ್ಮಾಣಗೊಂಡ ಕೇಂದ್ರೀಕೃತ ಅಡುಗೆ ಕೋಣೆ ಉದ್ಘಾಟನೆಗೆ ಆಗಮಿಸಿದ ಪುತ್ತಿಗೆ ಮಠದ ಶ್ರೀ ಸುಗಣೇಂದ್ರತೀರ್ಥ ಸ್ವಾಮೀಜಿ ಅವರನ್ನು ಇಸ್ಕಾನ್ ಬೆಂಗಳೂರಿನ ಮುಖ್ಯಸ್ಥರಾದ ಶ್ರೀ ಮಧು ಪಂಡಿತ್‌ದಾಸ್ ಜೀ ಹಾಗೂ ಚಂಚಲಪತಿದಾಸ್ ಜೀ ಅವರು ಬರಮಾಡಿಕೊಂಡು ಶ್ರೀಗಳಿಗೆ ಗೌರವ ಸಮರ್ಪಣೆ ಮಾಡಿದರು.
ನೂತನ ಅಡುಗೆ ಕೋಣೆ ಉದ್ಘಾಟಿಸಿದ ಶ್ರೀ ಸುಗಣೇಂದ್ರತೀರ್ಥ ಸ್ವಾಮೀಜಿ ಅವರು ಅಕ್ಷಯ ಪಾತ್ರೆ ಹಾಗೂ ಅನ್ನಬ್ರಹ್ಮ ಕ್ಷೇತ್ರವಾದ ಉಡುಪಿಗೆ ಇರುವ ನಂಟು ವಿವರಿಸಿದರು. ಇಸ್ಕಾನ್ ಮುಖ್ಯಸ್ಥ ಶ್ರೀ ಮಧು ಪಂಡಿತ್‌ದಾಸ್ ಜೀ ಮಾತನಾಡಿ ಪುತ್ತಿಗೆ ಶ್ರೀಗಳ ಚತುರ್ಥ ಪರ್ಯಾಯದ ಪ್ರಮುಖ ಯೋಜನೆಯದ ಕೋಟಿ ಗೀತಾ ಲೇಖನಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.