ಹೆಬ್ರಿ: ಸ್ವಾತಂತ್ರೃ ಹೋರಾಟಗಾರರಾಗಿ ಪಡುಕುಡೂರಿನ ಕೀರ್ತಿ ಜಗದಗಲ ಪಸರಿಸಿ ಜನಮನದಲ್ಲಿ ಶಾಶ್ವತವಾಗಿ ನೆಲೆಯಾದ ಪಡುಕುಡೂರು ಬೀಡು ಎಂ.ಡಿ.ಅಧಿಕಾರಿ ಅವರ ಪುತ್ಥಳಿಯನ್ನು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಲೋಕಾರ್ಪಣೆ ಮಾಡಿದರು.
ಪಡಕುಪರ್ಕಳ ಶಂಕರ ಶೆಟ್ಟಿ, ಜಗದೀಶ ಹೆಗ್ಡೆ, ಪುತ್ಥಳಿ ಪ್ರತಿಷ್ಠಾಪನಾ ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಶ ಶೆಟ್ಟಿ, ಎಂ.ಡಿ.ಅಧಿಕಾರಿ ಅಭಯಲಕ್ಷ್ಮೀ, ಕಾರ್ಕಳ ಶಾಸಕ ಸುನೀಲ್ ಕುಮಾರ್, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಅಭಯಚಂದ್ರ ಜೈನ್, ವಕೀಲರಾದ ಎಂ.ಕೆ.ವಿಜಯ ಕುಮಾರ್, ಡಾ.ಎಂ.ಎಸ್.ರಾವ್ ಮುದ್ರಾಡಿ, ಡಾ.ಜಯರಾಮ ಹೆಗ್ಡೆ ಪಡುಕುಡೂರು ಮತ್ತಿತರರು ಇದ್ದರು.