ತಿ.ನರಸೀಪುರ ತಾಲೂಕಿನ ಕರೋಹಟ್ಟಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಯರಗನಹಳ್ಳಿ ಪುಟ್ಟಬಸಮ್ಮ ಸೋಮವಾರ ಅವಿರೋಧವಾಗಿ ಆಯ್ಕೆಯಾದರು. ಮಂಜುಳಾ ರೇವಣ್ಣ, ಕೆ.ಬಿ.ಜಗದೀಶ್, ಪ್ರಭು, ನಾಗರಾಜು, ಮಹದೇವಯ್ಯ, ಕೇತಹಳ್ಳಿ ರಾಜಣ್ಣ, ಕೆ.ಎನ್.ಪ್ರಭುಸ್ವಾಮಿ ಇತರರು ಇದ್ದರು. 
ಜಿಲ್ಲೆ

ಕರೋಹಟ್ಟಿ ಗ್ರಾಪಂಗೆ ಪುಟ್ಟಬಸಮ್ಮ ಅಧ್ಯಕ್ಷೆ

ತಿ.ನರಸೀಪುರ: ತಾಲೂಕಿನ ಕರೋಹಟ್ಟಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಯರಗನಹಳ್ಳಿ ಪುಟ್ಟಬಸಮ್ಮ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.

ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಮಂಜುಳಾ ರೇವಣ್ಣ ರಾಜೀನಾಮೆ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣಾ ಸಭೆ ಆಯೋಜಿಸಲಾಗಿತ್ತು. ಪ.ಜಾತಿ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಯರಗನಹಳ್ಳಿ ಪುಟ್ಟಬಸಮ್ಮ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು.

ಹಿರಿಯ ಮುಖಂಡ ಕಪ್ಪಣ್ಣ ಮಾತನಾಡಿ, ಮಂಡಲ ಪಂಚಾಯಿತಿಯಿಂದ ಗ್ರಾ.ಪಂ.ವರೆಗೂ ಯರಗನಹಳ್ಳಿ ಗ್ರಾಮಕ್ಕೆ ಅಧ್ಯಕ್ಷ ಸ್ಥಾನ ಸಿಕ್ಕಿರಲಿಲ್ಲ. ಈಗಿನ ಸದಸ್ಯರು ಒಗ್ಗಟ್ಟನಿಂದ ಒಮ್ಮತದ ನಿರ್ಧಾರ ತೆಗೆದುಕೊಂಡು ಪುಟ್ಟಬಸಮ್ಮ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಗ್ರಾಮಕ್ಕೆ ಗೌರವ ನೀಡಿದ್ದಾರೆ. ಸಿಕ್ಕ ಅವಕಾಶದಲ್ಲಿ ನೂತನ ಅಧ್ಯಕ್ಷರು ಅಭಿವೃದ್ಧಿ ಹಾಗೂ ಮೂಲಸೌಕರ್ಯಕ್ಕೆ ಗ್ರಾಮೀಣ ಜನರಿಗೆ ಕಲ್ಪಿಸಲು ಎಲ್ಲರೊಂದಿಗೆ ಕಾರ್ಯ ನಿರ್ವಹಿಸಲಿ ಎಂದು ಸಲಹೆ ನೀಡಿದರು.

ಪಂಚಾಯಿತಿಯ ಒಟ್ಟು 19 ಸದಸ್ಯರಲ್ಲಿ 13 ಸದಸ್ಯರು ಹಾಜರಾಗಿ ಅಧ್ಯಕ್ಷರ ಅವಿರೋಧ ಆಯ್ಕೆಗೆ ಸಮ್ಮತಿ ಸೂಚಿಸಿದರು. ಕಾವೇರಿ ನೀರಾವರಿ ನಿಗಮದ ಎಇಇ ಎಸ್.ಮಂಜುನಾಥ್ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿರು. ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ಬೆಂಬಲಿಗರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಉಪಾಧ್ಯಕ್ಷ ರೇವಣ್ಣ, ಸದಸ್ಯರಾದ ಕೆ.ಬಿ.ಜಗದೀಶ್, ಪುಟ್ಟಸ್ವಾಮಿ, ಕೆ.ಎನ್. ನಾಗರಾಜು, ಎಸ್.ಎಲ್.ಜಯಶ್ರೀ, ನಂದಿನಿ, ಮಮತಾ, ನಾಗರಾಜು, ಸುರೇಶ, ಪ್ರಭು, ಸುಶೀಲಮ್ಮ, ಮಂಜು, ಮುಖಂಡರಾದ ಕರೋಹಟ್ಟಿ ಮಹದೇವಯ್ಯ, ಕೆ.ಎನ್.ಪ್ರಭುಸ್ವಾಮಿ, ಕೇತಹಳ್ಳಿ ರಾಜಣ್ಣ, ರೇವಣ್ಣ, ಬನ್ನಹಳ್ಳಿ ಸೋಮಣ್ಣ, ವಾಟಾಳು ನಾಗರಾಜ್, ಸೋಮೇಶ, ಮಾದೇಶ, ಪಿಡಿಒ ಸೋಲೋಮನ್ ರಾಜ್, ಕಾರ್ಯದರ್ಶಿ ಎಂ.ಮಹದೇವ, ಶೈಲಾ, ಬಿಲ್.ಎಸ್.ರಾಜು ಇತರರು ಇದ್ದರು.