ಗುಳೇದಗುಡ್ಡ: ಲಿಂ.ಡಾ.ಪಂ. ಪುಟ್ಟರಾಜ ಕವಿ ಗವಾಯಿಗಳವರು ಅಂಧ, ಅನಾಥರ ಬಾಳಿಗೆ ಬೆಳಕಾಗಿ ನಿಂತವರು. ರಾಜ್ಯದ ಸಾಕಷ್ಟು ಅಂಧ, ಅನಾಥ ಕಲಾವಿದರಿಗೆ ಆಶ್ರಯ ನೀಡಿ ಪೋಷಣೆ ಮಾಡಿದ್ದಾರೆ. ಅಂಥ ಮಹಾನ್ ವ್ಯಕ್ತಿ ಈ ಸಮಾಜದ ಆಶಾಕಿರಣರಾಗಿದ್ದಾರೆ ಎಂದು ಗದಗದ ಶ್ರೀ ವೀರೇಶ್ವರ ಪುಣ್ಯಾಶ್ರಮದ ಡಾ. ಕಲ್ಲಯ್ಯಜ್ಜನವರು ಹೇಳಿದರು.
ಸಮೀಪದ ಹಂಸನೂರ ಗ್ರಾಮದಲ್ಲಿ ಲಿಂ.ಡಾ.ಪಂ. ಪುಟ್ಟರಾಜ ಕವಿ ಗವಾಯಿಗಳವರ ಸೇವಾ ಸಮಿತಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ 14ನೇ ವರ್ಷದ ಸ್ಮರಣಾಂಜಲಿ, ಭಾವಚಿತ್ರ ಮೆರವಣಿಗೆ, ಪೂಜ್ಯರ ತುಲಾಬಾರ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪುಟ್ಟರಾಜ ಗವಾಯಿಗಳ ಸ್ಮರಣೆ ನಮ್ಮ ಬದುಕು ಪಾವನಗೊಳಿಸುತ್ತದೆ. ಗವಾಯಿಗಳ ಆಶ್ರಮದಲ್ಲಿ ನೆಲೆಸಿ ಬದುಕು ಕಟ್ಟಿಕೊಂಡ ಲಕ್ಷಾಂತರ ಅಂಧ, ಅನಾಥ ಸಂಗೀತ ಕಲಾವಿದರು ರಾಜ್ಯ, ದೇಶದ ಉದ್ದಗಲದಲ್ಲಿ ತಮ್ಮ ಬದುಕು ನಡೆಸುತ್ತಿದ್ದಾರೆ ಎಂದರು.
ಹಂಸನೂರ ಶಿವಾನಂದ ಮಠದ ಅಭಿನವ ಬಸವರಾಜೇಂದ್ರ ಶ್ರೀಗಳು, ಹಲಕುರ್ಕಿ ದಿಗಂಬರೇಶ್ವರ ಮಠದ ಷಢಕ್ಷರಯ್ಯ ಸ್ವಾಮಿಗಳು, ಒಪ್ಪತ್ತೇಶ್ವರ ಮಠದ ಅಭಿನವ ಒಪ್ಪತ್ತೇಶ್ವರ ಸ್ವಾಮಿಗಳು, ಕನ್ನೂರಮಠದ ವೀರರಾಜೇಂದ್ರ ಸ್ವಾಮಿಗಳು, ತೆಗ್ಗಿ ಶ್ರದ್ಧಾನಂದ ಮಠದ ವಿದ್ಯಾನಂದ ಸ್ವಾಮಿಗಳು, ಹೇಮರಾಜ ಶಾಸಿಗಳು ಮಾತನಾಡಿದರು.
ಲಿಂ.ಡಾ.ಪಂ. ಪುಟ್ಟರಾಜ ಕವಿ ಗವಾಯಿಗಳವರ ತುಲಾಭಾರ ಕಾರ್ಯಕ್ರಮವನ್ನು ಗ್ರಾಮಸ್ಥರು ನೆರವೇರಿಸಿದರು.
ಇದಕ್ಕೂ ಮುನ್ನ ಲಿಂ. ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ಭಾವಚಿತ್ರದ ಮೆರವಣಿಗೆ ಪಟ್ಟಣದಲಿ ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ, ಮೈಲಾರಲಿಂಗೇಶ್ವರ ಸಂಘದ ಅಧ್ಯಕ್ಷ ಮಹೇಶ ಹೊಸಗೌಡರ, ಹಂಸನೂರ ಗ್ರಾಪಂ ಅಧ್ಯಕ್ಷೆ ಆಶಾ ಚಿಂತಾಕಲ್ಲ, ಶಾಸಕರ ಆಪ್ತ ಸಹಾಯಕ ಪ್ರಭು ಕುಂಬಾರ, ಮಂಜುನಾಥ ಅರಳಿಟ್ಟಿ, ಎಂ.ಎಸ್. ಗುಡಿಸಾಗರ, ಉಮೇಶ ಮುಗ್ಗಜೋಳ, ಅಶೋಕ ಮರಾಠೆ, ಬಸವರಾಜ ಕುಂಬಾರ, ಭೀಮಸಿ ಚಿಮ್ಮಲ, ಶ್ರೀನಿವಾಸ ಚಿಂತಾಕಲ್ಲ, ಶೇಖರ ಚಿಂತಾಕಲ್ಲ, ಸುರೇಶ ಚಿಮ್ಮಲ, ಶಬ್ಬಿರ ನಾಯಕ ಇತರರಿದ್ದರು.
ಗುಳೇದಗುಡ್ಡ ಸಮೀಪದ ಹಂಸನೂರ ಗ್ರಾಮದಲ್ಲಿ ಲಿಂ. ಡಾ.ಪಂ. ಪುಟ್ಟರಾಜ ಕವಿ ಗವಾಯಿಗಳವರ ತುಲಾಭಾರ ಕಾರ್ಯಕ್ರಮ ನಡೆಯಿತು.