ಆನೇಕಲ್ ವ್ಯಾಪ್ತಿಯಲ್ಲಿ ಅಕ್ರಮ ಬಡಾವಣೆಗಳಿಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಪ್ರಜಾ ವಿಮೋಚನಾ ಚಳವಳಿ ಸಂಘಟನೆಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಸಂಘಟನೆ ಅಧ್ಯಕ್ಷ ಆನೇಕಲ್ ಕೃಷ್ಣಪ್ಪ, ಸಂಘಟನೆ ಮುಖಂಡರಾದ ಬಳ್ಳೂರು ರಮೇಶ್, ಬಾಬಸಂದ್ರ ಗ್ರಾಮದ ನಾಗಪ್ಪ, ಮುನಿರಾಜು, ಹರೀಶ್, ತರುಣ್, ಆನೇಕಲ್ ಟೌನ್ ಆರ್.ವೆಂಕಟೇಶ್, ಎ.ಲವ, ಪರಶುರಾಮ್, ಮೋಹನ್, ಸಂತೋಷ್, ಮಂಜುನಾಥ್, ವೆಂಕಟಸ್ವಾಮಿ, ಚಂದ್ರು, ಮಂಜುನಾಥ್, ನಾಗೇಶ್, ಚಿನ್ನಪ್ಪ ಇದ್ದರು. 
ಜಿಲ್ಲೆ

ಅಕ್ರಮ ಬಡಾವಣೆಗಳಿಗೆ ಬ್ರೇಕ್ ಹಾಕಿ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಪ್ರಜಾವಿಮೋಚನಾ ಚಳವಳಿ ಸಂಘಟನೆ ಆಗ್ರಹ -ವಿವಿಧ ಗ್ರಾಪಂಗಳ ಮುಂದೆ ಪ್ರತಿಭಟನೆ

ಆನೇಕಲ್: ಯಾವುದೇ ಬಡಾವಣೆ ನಿರ್ಮಾಣಕ್ಕೆ ಸಮರ್ಪಕ ದಾಖಲೆಗಳಿದ್ದರೆ ಮಾತ್ರ ಅನುಮತಿ ನೀಡಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶವಿದ್ದರೂ ಸಂಬಂಧಿತ ಅಧಿಕಾರಿಗಳು ಪಾಲನೆ ಮಾಡುತ್ತಿಲ್ಲ. ಹಾಗಾಗಿ ಮೇಲಧಿಕಾರಿಗಳು ಅಕ್ರಮ ಬಡಾವಣೆಗಳ ನಿರ್ಮಾಣಕ್ಕೆ ಕಡಿವಾಣ ಹಾಕಬೇಕು ಎಂದು ಪ್ರಜಾ ವಿಮೋಚನಾ ಚಳವಳಿ ಆಗ್ರಹಿಸಿತು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿವಿಧ ಗ್ರಾಮಗಳ ಮುಖಂಡರು ಹಾಗೂ ಸಂಘಟನೆಯ ಮುಖಂಡರ ಸಭೆಯಲ್ಲಿ ಸಂಘಟನೆ ಅಧ್ಯಕ್ಷ ಆನೇಕಲ್ ಕೃಷ್ಣಪ್ಪ ಮಾತನಾಡಿ, ಹಸಿರು ವಲಯವಲ್ಲದೇ ಪಿಟಿಸಿಎಲ್ ಕಾಯ್ದೆ ಉಲ್ಲಂಘಿಸಿ ಹಲವು ಕಡೆ ಅಕ್ರಮವಾಗಿ ಬಡಾವಣೆಗಳನ್ನು ನಿರ್ಮಿಸಲಾಗುತ್ತುಇದೆ ಮಾಡುತ್ತಿದ್ದಾರೆ. ಇಂತಹ ಬಡಾವಣೆಗಳಿಗೆ ಅನುಮೋದನೆ ನೀಡಬಾರದು. ನೀಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದಲ್ಲದೇ ಉತ್ತರ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಬಡಾವಣೆಗಳನ್ನು ತೆರವುಗೊಳಿಸುವಂತೆ ಸೂಚಿಸಿತ್ತು. ಆದರೂ ತಾಲೂಕಿನ ಹಲವೆಡೆ ಈ ರೀತಿ ಅಕ್ರಮ ಬಡಾವಣೆಗಳನ್ನು ನಿರ್ಮಿಸಲಾಗುತ್ತಿದ್ದು, ಅಕ್ರಮ ಬಡಾವಣೆಗಳನ್ನು ವಿರೋಧಿಸಿ ಇದೇ ತಿಂಗಳು ಹುಲಿಮಂಗಲ ಹಾಗೂ ನರೇಗಾ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಪ್ರಜಾ ವಿಮೋಚನಾ ಚಳುವಳಿ ಸಂಘಟನೆ ಅಧ್ಯಕ್ಷ ಆರ್.ವೆಂಕಟೇಶ್ ಮಾತನಾಡಿ, ವಾಭಸಂದ್ರ ಸರ್ವೇ ನಂ.79ರಲ್ಲೂ ಬಡಾವಣೆ ನಿರ್ಮಿಸಿ ಮಾರಾಟ ಮಾಡುತ್ತಿದ್ದು, ಈ ಬಗ್ಗೆ ಈಗಾಗಲೇ ದೂರು ನಿಡಿದ್ದರೂ ಸಹ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದರು. ಸಭೆಯಲ್ಲಿ ಪ್ರಜಾ ವಿಮೋಚನಾ ಚಳವಳಿ ಸಂಘಟನೆ ಮುಖಂಡರಾದ ಬಳ್ಳೂರು ರಮೇಶ್, ಬಾಬಸಂದ್ರ ಗ್ರಾಮದ ನಾಗಪ್ಪ, ಮುನಿರಾಜು, ಹರೀಶ್, ತರುಣ್, ಆನೇಕಲ್ ಟೌನ್ ಆರ್.ವೆಂಕಟೇಶ್, ಎ.ಲವ, ಪರಶುರಾಮ್, ಮೋಹನ್, ಸಂತೋಷ್, ಮಂಜುನಾಥ್, ವೆಂಕಟಸ್ವಾಮಿ, ಚಂದ್ರು, ಮಂಜುನಾಥ್, ನಾಗೇಶ್, ಚಿನ್ನಪ್ಪ ಇದ್ದರು.

ರಸ್ತೆ ಇಲ್ಲದಿದ್ದರೂ ಸೈಟ್ ಸೃಷ್ಟಿ

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಆನೇಕಲ್ ತಾಲೂಕಿಗೆ ಒಳಪಡುವ ಹುಲಿಮಂಗಲ ಸರ್ವೇ ನಂ.313, 327, 156, 283, 279 ಹಾಲಿ ಪಿಟಿಸಿಎಲ್ ಕಾಯ್ದೆಯಡಿ ವಿಚಾರಣಾ ಹಂತದಲ್ಲಿರುವ ಜಮೀನಿನಲ್ಲಿ ಬಡಾವಣೆ ನಿರ್ಮಿಸಲಾಗುತ್ತಿದೆ. ಯಾವುದೇ ಇಲಾಖೆಯ ಅನುಮತಿ ಇಲ್ಲದೆ ಮನೆ ಕಟ್ಟುತ್ತಿದ್ದಾರೆ. ಅಕ್ರಮವಾಗಿ ಭೂಮಾಲೀಕರು ಮನೆಗಳನ್ನು ನಿರ್ಮಿಸಿ, ಅಮಾಯಕರಿಗೆ ವಂಚಿಸುತ್ತಿದ್ದಾರೆ. ಇಂತಹ ಮನೆಗಳಿಗೆ ಖಾತೆ ಮಾಡಬಾರದು, ವಿದ್ಯುತ್ ಸಂಪರ್ಕ ಕಲ್ಪಿಸಬಾರದು ಎಂಬ ಆದೇಶವನ್ನು ಅಧಿಕಾರಿಗಳು ಧಿಕ್ಕರಿಸಿದ್ದಾರೆ. ಹಾಗಾಗಿ ಮೇ13ರಂದು ಹುಲಿಮಂಗಲ ಗ್ರಾಪಂ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು. ಸರ್ಜಾಪುರದ ರಾಮನಾಯಕನಹಳ್ಳಿ ಸರ್ವೇ ನಂ.97, 98, 99, 100 ಸಂಬಂಧಿಸಿದಂತೆ ಎಸಿ ನ್ಯಾಯಾಲಯದಲ್ಲಿ ವ್ಯಾಜ್ಯಗಳು ವಿಚಾರಣೆ ಹಂತದಲ್ಲಿವೆ. ಆದರೆ ಬಲಾಢ್ಯರು ಬಡಾವಣೆ ನಿರ್ಮಾಣ ಮಾಡಿ, ರಸ್ತೆ ಇಲ್ಲದೇ ಇದ್ದರೂ ಸೈಟ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ಈ ಸಂಬಂಧ ಮೇ 16ರಂದು ನರೇಗಾ ಗ್ರಾಪಂ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುತ್ತಿದ್ದೇವೆ ಎಂದರು.