ಜಿಲ್ಲೆ

ಕಿರೇಸೂರಲ್ಲಿ ಪುಸ್ತಕ ಜೋಳಿಗೆ ಆರಂಭೋತ್ಸವ

Dharwada - Basavaraj Idli

ಹುಬ್ಬಳ್ಳಿ: ಡಿ.ಎಸ್.ಇ.ಆರ್.ಟಿ ಮತ್ತು ಐಎಫ್ಎ ಸಹಯೋಗದಲ್ಲಿ ಕಲಿ-ಕಲಿಸು ಯೋಜನೆ ಅಡಿಯಲ್ಲಿ ತಾಲೂಕಿನ ಕಿರೇಸೂರ ಸರ್ಕಾರಿ ಪ್ರೌಢಶಾಲೆಯ ಅರಳೀಕಟ್ಟೆ ತೆರೆದ ವಾಚನಾಲಯದಲ್ಲಿ ಜ. 25ರಂದು ಬೆಳಗ್ಗೆ 11ಕ್ಕೆ ವಿಶೇಷ ಆಂದೋಲನ ಪುಸ್ತಕ ಜೋಳಿಗೆ ಆರಂಭ ನಡೆಯಲಿದೆ.

ಕಿರೇಸೂರ ಗ್ರಾಮದೇವತೆ ದೇವಸ್ಥಾನ ಆವರಣದಿಂದ ಬೀದಿಗಳಲ್ಲಿ ಸಂಚರಿಸಿ ಅರಳೀಕಟ್ಟೆ ಬಯಲಿನಲ್ಲಿ ಮರಳಿ ಸಮಾಗಮವಾಗಲಿದೆ.
ಬನ್ನಿ, ಜೋಳಿಗೆಗೆ ಪುಸ್ತಕ ದಾನ ನೀಡಿ. ಪುಸ್ತಕ ದಾನ ಶ್ರೇಷ್ಠ ದಾನ, ಪುಸ್ತಕ ಜೋಳಿಗೆ -ಮಸ್ತಕದ ಹೋಳಿಗೆ ಎಂಬ ಅಭಿಯಾನ ನಡೆಸಲಾಗುತ್ತದೆ ಎಂದು ಸಂಚಾಲಕ ಡಾ. ಲಿಂಗರಾಜ ರಾಮಾಪೂರ ತಿಳಿಸಿದ್ದಾರೆ.