ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀರಾಮಮಂದಿರದ ಯಶಸ್ವೀ ಲೋಕಾರ್ಪಣೆಗಾಗಿ ವಿಪ್ರಬಾಂಧವರು ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳಿನ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಮತ್ತು ಸೋಮೇಶ್ವರ ದೇವಾಲಯದ ಆವರಣದಲ್ಲಿ ಪುಷ್ಪಯಾಗ ನಡೆಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. 
ಜಿಲ್ಲೆ

ಶ್ರೀರಮಮಂದಿರ ಲೋಕಾರ್ಪಣೆ ಯಶಸ್ಸಿಗಾಗಿ ಪುಷ್ಪಯಾಗ

ಕೆ.ಆರ್.ಪೇಟೆ: ತಾಲೂಕಿನ ಅಕ್ಕಿಹೆಬ್ಬಾಳಿನ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಮತ್ತು ಸೋಮೇಶ್ವರ ದೇವಾಲಯದ ಆವರಣದಲ್ಲಿ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀರಾಮ ಮಂದಿರದ ಲೋಕಾರ್ಪಣೆ ಕಾರ್ಯದ ಯಶಸ್ಸಿಗಾಗಿ ವಿಪ್ರರು ಇತ್ತೀಚೆಗೆ ಪುಷ್ಪಯಾಗ ನಡೆಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಜ.22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವು ಪ್ರಧಾನಿ ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ ಲೋಕಾರ್ಪಣೆಯಾಗಲಿದೆ. ದೇಶಾದ್ಯಂತ ಶ್ರೀರಾಮ ನಾಮ, ಜಪವು ಮೊಳಗುತ್ತಿದೆ. ಸಾಧು-ಸಂತರು ಹಾಗೂ ಯತಿಗಳ ಸಮಕ್ಷಮದಲ್ಲಿ ರಾಮಮಂದಿರದ ಲೋಕಾರ್ಪಣೆಯಾಗುತ್ತಿರುವ ಸಂದರ್ಭದಲ್ಲಿ ದೇವಾಲಯದ ಲೋಕಾರ್ಪಣೆಗೆ ಯಾವುದೇ ವಿಘ್ನಗಳು ಬರದಂತೆ ಪುಷ್ಪಯಾಗ ಹೋಮ ನಡೆಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಯಾಗದ ಮೂಲಕ ಅಕ್ಕಿಹೆಬ್ಬಾಳಿನ ಶ್ರೀಲಕ್ಷ್ಮೀನರಸಿಂಹಸ್ವಾಮಿ ಮತ್ತು ಸೋಮೇಶ್ವರ ದೇವಾಲಯದ ಆವರಣದಲ್ಲಿ ಲೋಕಾರ್ಪಣೆ ಕಾರ್ಯದ ಯಶಸ್ಸಿಗೆ ಪ್ರಾರ್ಥಿಸಿ ವಿಶೇಷ ಪೂಜಾ ಕಾರ್ಯಕ್ರಮಗಳು ಆರಮಭಗೊಂಡಿದ್ದವು. ಅಯೋಧ್ಯೆಯಿಂದ ಆಗಮಿಸಿದ ಪವಿತ್ರ ಮಂತ್ರಾಕ್ಷತೆಗೆ ಪೂಜೆ ಸಲ್ಲಿಸುವ ಮೂಲಕ ಪುಷ್ಪಯಾಗ ಹೋಮ ಕಾರ್ಯಕ್ರಮಗಳು ನಡೆದವು. ಹೋಮ ಕಾರ್ಯದ ಅನಂತರ ಅಕ್ಕಿಹೆಬ್ಬಾಳು ಗ್ರಾಮದ ಮನೆ ಮನೆಗೂ ಮಂತ್ರಾಕ್ಷತೆ ಹಂಚುವ ಕಾರ್ಯ ಆರಂಭಿಸಲಾಯಿತು.
ಮೈಸೂರಿನ ಮಹಾರಾಜ ಸಂಸ್ಕೃತ ಪಾಠಶಾಲೆಯ ಪ್ರಾಂಶುಪಾಲ ಆಗಮಶಾಸ ಪ್ರವೀಣ ಅಕ್ಕಿಹೆಬ್ಬಾಳಿನ ಸತ್ಯನಾರಾಯಣ ಅವರ ನೇತೃತ್ವದಲ್ಲಿ ಪುಷ್ಪಯಾಗ ಹೋಮ, ಹವನ ಮತ್ತು ವಿಸೇಷ ಪೂಜಾ ಕಾರ್ಯಗಳು ನಡೆದವು.

ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಪಾರುಪತ್ತೇಗಾರ್ ರಮೇಶ್, ದೇವಾಲಯದ ಪ್ರಧಾನ ಅರ್ಚಕರಾದ ಶ್ರೀಧರ್‌ಭಟ್, ಟ್ರಸ್ಟಿಗಳಾದ ಎಂ.ಆರ್.ಅನಂತಸ್ವಾಮಿ, ಯೋಗಾನರಸಿಂಹ, ರಾಮಕೃಷ್ಣ, ಗ್ರಾಮ ಮುಖಂಡರಾದ ಎ.ಎಸ್.ಮಹಾಲಿಂಗ, ಎ.ಆರ್.ಶ್ರೀನಿವಾಸ್, ಮಹೇಶ್ ಸೇರಿದಂತೆ ನೂರಾರು ವಿಪ್ರರು ಪುಷ್ಪಯಾಗದಲ್ಲಿ ಭಾಗವಹಿಸಿದ್ದರು.

ಪುಷ್ಪಯಾಗದ ಸೇವಾಕರ್ತರಾದ ಮೈಸೂರಿನ ಗೋಪಿನಾಥ್ ದಂಪತಿ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಯಾಗದಲ್ಲಿ ಪಾಲ್ಗೊಂಡು ಪೂರ್ಣಾಹುತಿ ಸಲ್ಲಿಸಿದರು.