ತಾವರಗೇರಾದ ಹೊಕ್ರಾಣಿಯಲ್ಲಿ ಸಂಗ್ರಹಗೊಂಡ ತ್ಯಾಜ್ಯ.  
ಜಿಲ್ಲೆ

ಪುಷ್ಕರಣಿಯನ್ನ ಸ್ವಚ್ಛಗೊಳಿಸಿ

Kopala - Desk - Eraveni

ತಾವರಗೇರಾ: ಶ್ಯಾಮೀದಲಿ ದರ್ಗಾದ ಮುಂದಿರುವ ಪುಷ್ಕರಣಿಯಲ್ಲಿನ ಕಲುಷಿತದಿಂದ ದುರುವಾಸನೆ ಹರಡುತ್ತಿದ್ದು, ಸ್ವಚ್ಛಗೊಳಿಸುವಂತೆ ಪಟ್ಟಣದ ನಿವಾಸಿಗಳಾದ ಪ್ರವೀಣ ಕಲ್ಮಠ, ಹನಮಂತಪ್ಪ ಪಪಂಯನ್ನು ಒತ್ತಾಯಿಸಿದ್ದಾರೆ.

ಕಳೆದ ಎರಡು ವರ್ಷದ ಹಿಂದೆ ಪ.ಪಂ. ಆಡಳಿತದಿಂದ ಸ್ವಚ್ಛಗೊಳಿಸಲಾಗಿತ್ತು. ಅದರೆ, ಸದ್ಯ ನೀರಿಗೆ ಪ್ಲಾಸ್ಟಿಕ್ ವಸ್ತುಗಳನ್ನು ಬಿಸಾಡುತ್ತಿದ್ದಾರೆ.
ಇದರಿಂದ ಪುಷ್ಕರಣಿ ನೀರು ಬಟ್ಟೆ ತೊಳೆಯಲು ಸಹ ಬಳಕೆಬಾರದಂತೆವಾಗಿವೆ. ಮಳೆಗಾಲ ಬರುವ ಮುಂಚೆ ಹೂಳು ತೆಗೆಯಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಹೊಕ್ರಾಣಿ ಕಲುಷಿತದ ಬಗ್ಗೆ ತಿಳಿದಿದ್ದು, ಸ್ವಚ್ಛಗೊಳಿಸಲು ವ್ಯವಸ್ಥೆ ಮಾಡುತ್ತೇವೆ. ಸಾರ್ವಜನಿಕರು ಸಹ ತ್ಯಾಜ್ಯವನ್ನು ಪುಷ್ಕರಣಿಗೆ ಬೀಸಾಡಬಾರದು.ನಬಿಸಾಬ ಖುದನವರಪ.ಪಂ. ಮುಖ್ಯಾಧಿಕಾರಿ, ತಾವರಗೇರಾ.