ಕಲಘಟಗಿ: ಬೆಳಗಿನ ವಾಯು ವಿಹಾರಕ್ಕೆ ತೆರಳಿದ್ದ ಸಚಿವ ಸಂತೋಷ ಲಾಡ್ ರೈತರೊಬ್ಬರ ಹುಲ್ಲಿನ ಗಾಡಿ ತಳ್ಳುವ ಮೂಲಕ ಸರಳತೆ ಮೆರೆದಿದ್ದಾರೆ.
ತಾಲೂಕಿನ ಮಡಕಿಹೊನ್ನಳಿ ಗ್ರಾಮದಲ್ಲಿನ ತಮ್ಮ ಅಮೃತ ನಿವಾಸದಿಂದ ಕಲಘಟಗಿ- ತಡಸ ರಾಜ್ಯ ಹೆದ್ದಾರಿ ಮುಖಾಂತರ ವಾಯು ವಿಹಾರ ಮಾಡುತ್ತಿರುವಾಗ ಮಡಕಿಹೊನ್ನಳ್ಳಿ ಗ್ರಾಮದ ರೈತರೊಬ್ಬರು ಮೇವು ತರುವ ಸಂದರ್ಭದಲ್ಲಿ ಅದೇ ಮಾರ್ಗವಾಗಿ ವಾಯುವಿರಕ್ಕೆ ಹೋಗುತ್ತಿದ್ದ ಸಚಿವ ಸಂತೋಷ ಲಾಡ್ ಅವರು ರೈತನ ಹಲ್ಲಿನ ಗಾಡಿ ತಳ್ಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.