ಕಕಮರಿ: ಮಠ-ಮಂದಿರಗಗಳಿಂದ ಜನರಲ್ಲಿ ಒಳ್ಳೆಯ ಸಂಸ್ಕಾರ, ಆಧ್ಯಾತ್ಮಿಕ ಮನೋಭಾವ ಬೆಳೆಯುತ್ತದೆ ಎಂದು ತೆಲಸಂಗ ವೀರೇಶ ದೇವರು ಹೇಳಿದರು.
ಸ್ಥಳೀಯ ಸಿದ್ದಮಲ್ಲಯ್ಯ ಗುರುಸಿದ್ಧಮಲ್ಲಯ್ಯ ಶಿವಾಚಾರ್ಯ ಗುರುಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಈಚೆಗೆ ಹಮ್ಮಿಕೊಂಡಿದ್ದ ಪ್ರವಚನ ಮಂಗಳೋತ್ಸವದಲ್ಲಿ ಮಾತನಾಡಿ, ಪ್ರವಚನ ಕೇಳುವುದರಿಂದ ಮನುಷ್ಯನ ಮನಸ್ಸು ಹಸನಾಗುತ್ತದೆ ಎಂದರು.
ಶ್ರೀ ಅಮ್ಮಾಜೇಶ್ವರಿ ದೇವಸ್ಥಾನ ಅಧ್ಯಕ್ಷ ಅಪ್ಪುಗೌಡ ಪಾಟೀಲ ಮಾತನಾಡಿ, ಇಷ್ಟಲಿಂಗ ಪೂಜೆಯಿಂದ ಸಂಕಷ್ಟ ದೂರಾಗುತ್ತವೆ. ಮಾನಸಿಕ ನೆಮ್ಮದಿ, ಸಮಾಧಾನಕ್ಕೆ ನಿತ್ಯ ಲಿಂಗಪೂಜೆ ಮಾಡಬೇಕು. ಲಿಂಗವನ್ನು ಕಟ್ಟಿಕೊಳ್ಳದೇ ಇರುವ ಭಕ್ತರು ಲಿಂಗದೀಕ್ಷೆ ಪಡೆದುಕೊಳ್ಳಬೇಕು ಎಂದರು.
ಮಲ್ಲಿಕಾರ್ಜುನ ಹಿರೇಮಠ, ಸಿದ್ರಾಮ ಬಿಳ್ಳೂರ, ಸಿದ್ದಪ್ಪ ದಾಶ್ಯಾಳ, ಅಲ್ಲಯ್ಯ ಹಿರೇಮಠ, ಲಾಯಣ್ಣ ದಾಶ್ಯಾಳ, ಕಾಶೀನಾಥ ಹಿರೇಮಠ, ಭುಜಬಲಿ ಸವದತ್ತಿ, ಸಿದ್ದಪ್ಪ ಬಿಳ್ಳೂರ, ಶ್ರೀಶೈಲ ಜನಗೌಡ, ಅಪ್ಪಯ್ಯ ಮಠಪತಿ, ಸದಾಶಿವ ಬಿಳ್ಳೂರ, ಗುರನಿಂಗ ಬಾಳಿಕಾಯಿ, ಭೀಮು ಜನಗೌಡ, ಸಂಗಯ್ಯ ಹಿರೇಮಠ, ರಾಚಯ್ಯ ಹಿರೇಮಠ ಇತರರಿದ್ದರು.