ಜಿಲ್ಲೆ

ಶುದ್ಧ ಮನಸ್ಸಿನ ಕಾಯಕವೇ ಪರಮಾತ್ಮ

ಸೋಮಲಿಂಗ ತಳವಾರ

ತೊಂಡಿಕಟ್ಟಿ: ಶುದ್ಧ ಮನಸ್ಸಿನಿಂದ ಕಾಯಕ ಮಾಡಿದರೆ ಅವನೇ ಪರಮಾತ್ಮ ಎಂದು ಬೀದರ ಚಿದಂಬರಾಶ್ರಮದ ಡಾ.ಶಿವಕುಮಾರ ಸ್ವಾಮೀಜಿ ಹೇಳಿದರು.

ಗ್ರಾಮದಲ್ಲಿ ಅವಧೂತೆಕ್ಯ ಪುಂಡಲೀಕ ಮಹಾರಾಜರ ಶಿಲಾಮಂದಿರ ಲೋಕಾರ್ಪಣೆ ಹಾಗೂ ಗಾಳೇಶ್ವರ ಮಹಾರಾಜರ 80ನೇ ಪುಣ್ಯಾರಾಧನೆಯ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಚಿಂತನಾಗೋಷ್ಠಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅತಿಯಾದ ದುರಾಸೆಯಿಂದ ನಮ್ಮ ಪ್ರಕೃತಿಯನ್ನು ವಿಕೃತ ಮಾಡುತ್ತಿದ್ದೇವೆ. ನಿತ್ಯ ಸತ್ಸಂಗದಲ್ಲಿ ಪಾಲ್ಗೊಂಡು ಶರಣರು, ಮಹಾತ್ಮರ ವಾಣಿ ಆಲಿಸಿ ಸನ್ಮಾರ್ಗದಲ್ಲಿ ನಡೆಯಬೇಕು ಎಂದರು.

ಅರಕೇರಿಯ ಮುಮ್ಮೆಟಗುಡ್ಡದ ಅವಧೂತಸಿದ್ಧ ಮಹಾರಾಜರು ಮಾತನಾಡಿ, ನಾವು ಧರ್ಮವನ್ನು ರಸಿದಲ್ಲಿ ಧರ್ಮ ನಮ್ಮನ್ನು ರಸುತ್ತದೆ. ಸದಾಕಾಲ ಧರ್ಮದ ಪರ ಚಿಂತನೆ ಮಾಡಬೇಕು ಎಂದರು. ಬೀದರ ಗುರುದೇವ ಆಶ್ರಮದ ಗಣೇಶಾನಂದ ಮಹಾರಾಜರು ಮಾತನಾಡಿ, ಮನುಷ್ಯನಲ್ಲಿ ಅಂತಕರಣ ಸದ್ಗುಣದಿಂದ ತುಂಬಿದ್ದರೆ ಪರಮಾತ್ಮ ಒಲಿಯುತ್ತಾನೆ ಎಂದರು.

ಕಲಬುರ್ಗಿ ಪೂರ್ಣಪ್ರಜ್ಞಾ ಸಿದ್ಧಾರೂಢಾಶ್ರಮದ ಲಕ್ಷಿ$್ಮತಾಯಿ, ಬೀದರ ಗುರುದೇವ ಆಶ್ರಮದ ಸಿದ್ದೇಶ್ವರಿತಾಯಿ ಆಶೀರ್ವಚನ ನೀಡಿದರು. ಬೆಳಗಾವಿಯ ಏಮ್​ ಾರ್​ ಸೇವಾ ಸಂಸ್ಥೆಯ ಸ್ವಾಮಿ ಚಿತ್​ಪ್ರಕಾಶಾನಂದ ಸರಸ್ವತಿ ಶ್ರೀಗಳು ಅಧ್ಯತೆ ವಹಿಸಿದ್ದರು. ಗಾಳೇಶ್ವರ ಮಠದ ಪೀಠಾಧಿಪತಿ ಅಭಿನವ ವೆಂಕಟೇಶ್ವರ ಮಹಾರಾಜರು,

ಹುಣಶ್ಯಾಳ ಪಿಜಿ ನಿಜಗುಣ ದೇವರು, ಹಡಗಿನಾಳದ ಮುತ್ತೇಶ್ವರ ಶ್ರೀಗಳು, ಕರೀಕಟ್ಟಿಯ ಕೀರ್ತನಕೇಸರಿ ಗುರುನಾಥ ಶಾಸ್ತ್ರೀಗಳು, ಅಮಲಝರಿಯ ಶರೀಪ ಶಿವಯೋಗಿಗಳು ಇತರರಿದ್ದರು.