ಜಿಲ್ಲೆ

ಕನಿಷ್ಠ ಬೆಂಬಲ ಯೋಜನೆಯಡಿ ಬೆಳೆ ಉತ್ಪನ್ನಗಳ ಖರೀದಿ

ಚಿಕ್ಕಬಳ್ಳಾಪುರ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟಕ್ಕೆ 5641 ರೈತರು ಹೆಸರು ನೋಂದಾಯಿಸಿಕೊAಡಿದ್ದು 85,437 ಕ್ವಿಂಟಾಲ್ ಖರೀದಿಸಲಾಗುತ್ತಿದೆ.

ಪ್ರಸಕ್ತ ಸಾಲಿನಲ್ಲಿ ರೈತರಿಂದ ರಾಗಿ, ಭತ್ತ ಮತ್ತು ಜೋಳ ಖರೀದಿಗಾಗಿ ಡಿ.1 ರಿಂದ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಸರ್ಕಾರದ ಆದೇಶದಂತೆ ನೋಂದಾಯಿತ ರೈತರಿಂದ ಕನಿಷ್ಠ ಬೆಂಬಲ ಯೋಜನೆಯಡಿ ರಾಗಿ, ಭತ್ತ ಹಾಗೂ ಜೋಳವನ್ನು ಖರೀದಿಸಲಾಗುತ್ತದೆ. ಅದರಂತೆ ಕ್ವಿಂಟಾಲ್ಗೆ ದರ ಭತ್ತಕ್ಕೆ (ಸಾಮಾನ್ಯ) 2300 ರೂ, ಭತ್ತಕ್ಕೆ (ಗ್ರೇಡ್ ಎ) 2320 ರೂ, ಜೋಳಕ್ಕೆ 3,371 ರೂ. ದರ ನಿಗದಿಪಡಿಸಲಾಗಿದೆ. ಆದರೆ, ಇಲ್ಲಿಯವರೆಗೂ ರಾಗಿ ಮಾರಾಟಕ್ಕೆ ಮಾತ್ರ 5641 ರೈತರು ಹೆಸರು ನೋಂದಾಯಿಸಿಕೊAಡಿದ್ದಾರೆ. ಆದರೆ, ಇನ್ನು ಖರೀದಿ ಪ್ರಕ್ರಿಯೆ ಪ್ರಾರಂಭವಾಗಿಲ್ಲ.

ಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲಿ ಮಳೆಯ ಅಭಾವ, ಮೋಡ ಮುಸುಕಿದ ವಾತಾವರಣ, ಚಂಡಮಾರುತ ಪ್ರಭಾವ ಸೇರಿದಂತೆ ಹವಾಮಾನ ವೈಪರೀತ್ಯದ ನಾನಾ ಕಾರಣಗಳಿಂದ ಸಮರ್ಪಕವಾಗಿ ಗುಣಮಟ್ಟದ ಇಳುವರಿ ಬಂದಿಲ್ಲ. ಇದರ ನಡುವೆ ಕಳೆದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನಿರ್ದಿಷ್ಟ ಉತ್ಪನ್ನಗಳನ್ನು ಖರೀದಿಸಲಾಗುತ್ತದೆ. ಇದಕ್ಕೆ ಪ್ರತಿ ತಾಲೂಕುಗಳಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಹಾಗೆಯೇ ರೈತ ಸಂಪರ್ಕ ಕೇಂದ್ರ, ಗ್ರಾ.ಪಂ, ಹಾಲು ಉತ್ಪಾದಕರ ಸಹಕಾರ ಸಂಘ, ಕೃಷಿ ಇಲಾಖೆಯ ಕಚೇರಿಗಳಲ್ಲಿ ಭಿತ್ತಿ ಪತ್ರ ಪ್ರದರ್ಶನ, ಕರಪತ್ರಗಳನ್ನು ವಿತರಿಸುವ ಮೂಲಕ ಜಾಗೃತಿ ಮೂಡಿಸಲಾಗಿತ್ತು.

*ರೈತರಿಂದ ಉತ್ತಮ ಪ್ರತಿಕ್ರಿಯೆ

ಕನಿಷ್ಠ ಬೆಂಬಲ ಯೋಜನೆಯಡಿ ರಾಗಿ ಮಾರಾಟಕ್ಕೆ ಜಿಲ್ಲೆಯ ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಮತ್ತು ಗುಡಿಬಂಡೆಯಲ್ಲಿ ರಾಗಿ ಮಾರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೋಂದಣಿಯಾಗಿದೆ. ಇನ್ನು ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

*ಜೋಳಕ್ಕೆ ನೋಂದಣಿ ಇಲ್ಲ:

ಕನಿಷ್ಠ ಬೆಂಬಲ ಬೆಳೆ ಯೋಜನೆಯಡಿ ಜೋಳವನ್ನು ಖರೀದಿಸಲಾಗುತ್ತಿದೆ. ಆದರೆ, ಯಾರೂ ನೋಂದಾಯಿಸಿಕೊAಡಿಲ್ಲ. ಇದಕ್ಕೆ ಸಂಬAಧಿಸಿದAತೆ ಮೊದಲಿನಿಂದಲೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದಕ್ಕೆ ಸ್ಥಳೀಯವಾಗಿ ಖಾಸಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ, ಬೇರೆಡೆಗೆ ಸಾಗಾಣೆ ಸೇರಿದಂತೆ ನಾನಾ ಕಾರಣಗಳು ಇವೆ.