ಶ್ರೀಪುರಂಜಂಕ್ಷನಲ್ಲಿ ಬಿ.ಆರ್.ಅಂಬೇಡ್ಕರ್ ಪುತ್ತಳಿಯನ್ನು ಅನಾವರಣಗೊಳಿಸಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದರು. 
ಜಿಲ್ಲೆ

ಡಾ.ಬಿ.ಆರ್.ಅಂಬೇಡ್ಕರ್ ಪುತ್ತಳಿ ಅನಾವರಣ

Kopala - Desk - Eraveni

ಗೊರೇಬಾಳ: ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರು ಸಂವಿಂಧಾನ ರಚಿಸುವ ಮೂಲಕ ಸಮಸಮಾಜ ನಿರ್ಮಾಣಕ್ಕೆ ಸಾಕ್ಷಿಯಾಗಿದ್ದಾರೆ ಎಂದು ಸಿಂಧನೂರ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ಹೊಸಳ್ಳಿ ಇ.ಜೆ. ಪಂಚಾಯತಿ ವ್ಯಾಪ್ತಿಯ ಶ್ರೀಪುರಂ ಜಂಕ್ಷನ್‌ನ ಅಂಬೇಡ್ಕರ್ ನಗರದಲ್ಲಿ ಬಿ.ಆರ್.ಅಂಬೇಡ್ಕರ್ ಅವರ ಪುತ್ತಳಿಯನ್ನು ಭಾನುವಾರ ಅನಾವರಣಗೊಳಿಸಿ ಮಾತನಾಡಿದರು.

ಪರಿಶಿಷ್ಟ ರ ಕಾಲನಿಗಳಿಗೆ ಮೂಲ ಸೌಲಭ್ಯ ಒದಗಿಸಲು ಮತ್ತು ಜೀವನ ಸುಧಾರಿಸಲು ಅನೇಕ ಕಾರ್ಯಕ್ರಮಗಳನ್ನು ಆಚರಣೆಗೆ ತಂದಿದ್ದು, ಸದುಪಯೋಗ ಪಡೆದುಕೊಂಡು ಸಮಸಮಾಜ ನಿರ್ಮಾಣದ ಗುರಿಯನ್ನು ತಲುಪಿ.

ಸಿಎಂ ಸಿದ್ದರಾಮಯ್ಯ ಸರಕಾರದಲ್ಲಿ ಇದೇ ಮೋದಲಬಾರಿಗೆ ಕ್ಷೇತ್ರದ 50ಗ್ರಾಮಗಳಲ್ಲಿ ಪೈಲಟ್ ಪ್ರೊಡಕ್ಟ ಯೊಜನೆಯನ್ನು ಜಾರಿಗೆ ತರಲು ಮಾತುಕತೆಯಾಗಿದ್ದು, ಜಾರಿಗೆ ಯೊಜನೆ ರೂಪಿಸಲು ತಿಳಿಸಿದ್ದಾರೆ.

ಪ್ರತಿಗ್ರಾಮದಲ್ಲಿ ಎರಡು ಎಕರೆ ಭೂಮಿ ಖರೀದಿಸಿ ಹೌಸಿಂಗ್ ಲೇಔಟ್‌ನಂತೆ ಮನೆ, ದಾರಿ ಸ್ವಚ್ಚ ನೀರು, ಜನರ ಇನ್ನಿತರ ಮೂಲ ಸೌಲಭ್ಯಗಳನ್ನು ನಿರ್ಮಿಸಿ ಹಕ್ಕುಪತ್ರಗಳನ್ನು ನೀಡಲಾಗುತ್ತದೆ ಎಂದರು.

ಸರಕಾರ ಪರಿಶಿಷ್ಟರ ಕಲ್ಯಾಣ ಯೊಜನೆಗಳಿಗೆ 34ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು ಪ.ಜಾ.ಪಂ.ಗಳ ಜನರು ಶಿಕ್ಷಣ, ಆರೊಗ್ಯ, ಮುಲ ಸೌಲಭ್ಯಗಳಿಗೆ ಸದುಪಯೊಗಪಡಿಸಿಕೊಳ್ಳಲು ಸೂಚಿಸಿದರು.

ಸಿಂಧನೂರು ಪಟ್ಟಣದ ಹತ್ತಿರ ಒಂದು ಎಕರೆ ಪ್ರದೇಶದಲ್ಲಿ ಬಾಬು ಜಗಜಿವನರಾಮ ಭವನ ನಿರ್ಮಾಣಕ್ಕೆ ಯೊಜನೆ ರೂಪಿಸಲಾಗಿದೆ ಎಂದರು.
ವಾಣಿಜ್ಯೊದ್ಯಮಿ ಗುನ್ನೆಶ್ವರರಾವ್, ಮುಖ್ಯ ಅತಿಥಿಗಳಾಗಿ ಶೇಖರಪ್ಪ ಗಿಣಿವಾರ, ನಗರ ಸಭಾ ಸದಸ್ಯರು,

ಬಸವರಾಜ ಬೆಳಗುರ್ಕಿ ಸಾಸಲ್ಮರಿ, ಬಸವರಾಜ ನಡವಿ ಅಮರಾಪುರ, ಹೊಸಳ್ಳಿ ಗ್ರಾಪಂ ಅದ್ಯಕ್ಷೆ ರೇಣುಕಾ ಹುಸೇನಪ್ಪ, ಎಂ.ರಂಗನಗೌಡ, ಎಂ.ಲಕ್ಷ್ಮಣ ಮೂಡಲಗಿರಿ ಕ್ಯಾಂಪ್, ಮರಿಯಪ್ಪ ಜಾಲಿಹಾಳ ಅದ್ಯಕ್ಷರು ಮಾದಿಗ ಸಮಾಜ.

ರಾಮಣ್ಣ ಗೊನವಾರ ಛಲವಾದಿ ಸಮಾಜದ ಅದ್ಯಕ್ಷರು, ರಂಗಾರಡ್ಡಿ ಸಾಸಲ್ಮರಿ, ವಿರುಪಕ್ಷರಡ್ಡಿ ಹೊಸಳ್ಳಿ ಕ್ಯಾಂಪ್, ಶರಣೇಗೌಡ ಸಾಸಲ್ಮರಿ, ಮಲ್ಲಪ್ಪ ನಾಯಕ ಹಟ್ಟಿ, ಪ್ರಸಾದ ಸಾಸಲ್ಮರಿಕ್ಯಾಂಪ್, ರಾಮಣ್ಣ ಸಾಸಲ್ಮರಿ, ಶಿಕ್ಷಕ ಚಿದಾನಂದಪ್ಪ ಇದ್ದರು.