ಜಿಲ್ಲೆ

ಪುರಾಣ ಗ್ರಂಥ ಬಿಡುಗಡೆ

ಚನ್ನಮ್ಮನ ಕಿತ್ತೂರು: ಸಮೀಪದ ಹಿರೇನಂದಳ್ಳಿಯಲ್ಲಿ ಸದ್ಗುರು ನಾಗಭೂಷಣ ಶಿವಯೋಗಿಗಳ 55ನೇ ಸ್ಮರಣೋತ್ಸವದ ನಿಮಿತ್ತ ಶಿವಯೋಗಿಗಳ ಪುಣ್ಯಾಶ್ರಮದಲ್ಲಿ ನಾಗಯ್ಯ ಹುಲೆಪ್ಪನವರಮಠ ಅವರು ಭಾಮಿನಿ ಷಟ್ಪದಿಯೊಂದಿಗೆ ರಚಿಸಿದ ಸದ್ಗುರು ಶ್ರೀ ನಾಗಭೂಷಣ ಶಿವಯೋಗಿಗಳ ಪುರಾಣ ಗ್ರಂಥವನ್ನು ಈಚೆಗೆ ಬಿಡುಗಡೆಗೊಳಿಸಲಾಯಿತು. ಸದ್ಗುರುದೇವ ಪ್ರಣವಾನಂದ ಸ್ವಾಮೀಜಿ, ಡಾ. ಗುರುದೇವಿ ಹುಲೆಪ್ಪನವರಮಠ, ಸದ್ಗುರು ಪರಮಾನಂದ ಸ್ವಾಮೀಜಿ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ವೆಜನಾಥ ಮಾ ಪಾಟೀಲ, ಡಾ.ಎಸ್​.ಬಿ.ದಳವಾಯಿ, ರಾಜೇಂದ್ರ ಹಿರೇಮಠ ಇತರರು ಇದ್ದರು.