ರಟ್ಟಿಹಳ್ಳಿ: ಪಟ್ಟಣದ ಒಕ್ಕಲಿಗೇರಿ ಓಣಿಯ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಶ್ರೀ ಮಾರಿಕಾಂಬಾದೇವಿ ಹಾಗೂ ಶ್ರೀ ದುರ್ಗಾದೇವಿ ದಸರಾ ಮಹೋತ್ಸವ ನಿಮಿತ್ತ ಅ. 3ರಿಂದ 12ರವರೆಗೆ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ಜರುಗಲಿವೆ.
ಅ. 3ಕ್ಕೆ ಶ್ರೀದೇವಿಯ ಘಟಸ್ಥಾಪನೆ, 10ರಂದು ಉಡಿ ತುಂಬುವುದು, 11ರಂದು ಮಹಾನವಮಿ, 12ರಂದು ಪುರಾಣ ಮಂಗಳ ಕಾರ್ಯವನ್ನು ಸಂಪೂರ್ಣಗೊಳಿಸಿ ಬನ್ನಿ ಮುಡಿಯಲಾಗುವುದು.
ಬೆಂಗಳೂರು ಶ್ರೀ ಸಿದ್ಧಾರೂಢ ಮಠ ನೆಲಮಂಗಲದ ಮಾತೋಶ್ರೀ ಉಮಾಭಾರತಿ ಅವರಿಂದ ಪ್ರತಿ ದಿವಸ ಸಂಜೆ 7 ಗಂಟೆಗೆ ಪುರಾಣ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.