ಜಿಲ್ಲೆ

ಸುಕ್ಷೇತ್ರ ಲಚ್ಯಾಣದಲ್ಲಿ ಪುರಾಣ

ಗಿರೀಶ ಸಗರ

ಇಂಡಿ : ತಾಲೂಕಿನ ಸುೇತ್ರ ಲಚ್ಯಾಣದಲ್ಲಿ ಸೆ. 25 ಹಾಗೂ 26 ರಂದು ಜರುಗಲಿರುವ ಸಿದ್ಧಲಿಂಗ ಮಹಾರಾಜರ 97ನೇ ಪುಣ್ಯಾರಾಧನೆ ಅಂಗವಾಗಿ ನವಲಗುಂದದ ಅಜಾತ ನಾಗಲಿಂಗ ಅಜ್ಜನವರ ಜೀವನ ಚರಿತ್ರೆ ಕುರಿತ 13 ದಿನಗಳ ಪುರಾಣ ಕಾರ್ಯಕ್ರಮ ಪ್ರಾರಂಭೋತ್ಸವ ಸೆ. 12 ರಂದು ಸಂಜೆ 6.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಪ್ರವಚನಕಾರ ಮದರಖಂಡಿಯ ನಿಜಗುಣಾನಂದ ಸ್ವಾಮೀಜಿ ಪುರಾಣ ನಡೆಸಿಕೊಡಲಿದ್ದಾರೆ. ಬಂಥನಾಳ ಹಾಗೂ ಲಚ್ಯಾಣ ಮಠದ ಪೀಠಾಧೀಶ ಡಾ. ವೃಷಭ ಲಿಂಗೇಶ್ವರ ಶಿವಯೋಗಿಗಳು, ತಿಕೋಟಾದ ಚನ್ನಮಲ್ಲಿಕಾರ್ಜುನ ಮಹಾಸ್ವಾಮೀಜಿ, ಗೊಳಸಾರದ ಅಭಿನವ ಪುಂಡಲಿಂಗ ಸ್ವಾಮೀಜಿ, ಆಳೂರಿನ ಶಂಕರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ಗವಾಯಿಗಳಾಗಿ ರುದ್ರಪ್ಪ ಹೂಗಾರ, ತಬಲಾವಾದಕರಾಗಿ ನಿರಂಜನ ರುಇಕರ ಸಂಗೀತ ಸೇವೆ ಸಲ್ಲಿಸಲಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.