ಮಜಲಟ್ಟಿ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಬಸವಪ್ರಭು ಮಹಾರಾಜರು, ಸಾವಿತ್ರಮ್ಮ ವಿಜಯನಗರೆ, ಭರತ ಕಲಾಚಂದ್ರ ಇತರರಿದ್ದರು. 
ಜಿಲ್ಲೆ

ಪುರಾಣ ಕೇಳುವುದರಿಂದ ಜೀವನ ಪಾವನ

ಚಿಕ್ಕೋಡಿ: ಪುರಾಣ ಪ್ರವಚನ ಕೇಳುವುದರಿಂದ ಮನಸ್ಸಿನಲ್ಲಿ ಭಕ್ತಿಭಾವ ಮೂಡುತ್ತದೆ ಎಂದು ಬಸವಪ್ರಭು ಮಹಾರಾಜರು ಹೇಳಿದರು.

ತಾಲೂಕಿನ ಮಜಲಟ್ಟಿ ಗ್ರಾಮದ ಕಲ್ಮೇಶ್ವರ ಮಂದಿರದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ಶಿವ ಮಹಾಪುರಾಣ ಪ್ರವಚನದಲ್ಲಿ ಮಾತನಾಡಿ, ಪ್ರವಚನ ಆಲಿಸುವ ಮೂಲಕ ಜೀವನ ಪಾವನ ಮಾಡಿಕೊಳ್ಳಬೇಕು ಎಂದರು.

ಸಾವಿತ್ರಮ್ಮ ವಿಜಯನಗರೆ ಮಾತನಾಡಿ, ದಾನ, ಪರೋಪಕಾರ ಗುಣಗಳನ್ನು ಅಳವಡಿಸಿಕೊಂಡು ಪುಣ್ಯ ಸಂಪಾದಿಸಬೇಕು ಎಂದರು.

ಭರತ ಕಲಾಚಂದ್ರ, ಸಾವಂತ ಜೋಡಟ್ಟಿ, ಮಾರುತಿ ಕಾಮಗೌಡ, ದುಂಡಪ್ಪ ಎಡಪ್ಪಗೋಳ ಇತರರಿದ್ದರು. ಎಲ್.ಎಂ.ತೋರಣಹಳ್ಳಿ ಸ್ವಾಗತಿಸಿ, ವಂದಿಸಿದರು. ಸುಜಾತಾ ಮಗದುಮ ನಿರೂಪಿಸಿದರು.