ಸಿರಿಗೇರಿ ಶ್ರೀ ನಾಗನಾಥೇಶ್ವರ ದೇವಸ್ಥಾನದಲ್ಲಿ ಪುರಾಣ ಪ್ರವಚನ ಕಾರ್ಯಕ್ರಮವನ್ನು ಶ್ರೀಧರಗಡ್ಡೆಯ ಮರಿಕೊಟ್ಟೂರು ಸ್ವಾಮೀಜಿ ಉದ್ಘಾಟಿಸಿದರು. ಧರ್ಮದರ್ಶಿ ಮಹಾರುದ್ರಗೌಡ, ಪ್ರಮುಖರಾದ ಅಂಬರೀಷ ಗೌಡ, ಗೋಡೆ ಚಂದ್ರಶೇಖರ, ವಕೀಲರಾದ ನಾಗರಾಜ ಗೌಡ, ಆನಂದ ಗೌಡ, ಪಂಚಾಕ್ಷರಯ್ಯ ಸ್ವಾಮಿ ಇತರರಿದ್ದರು. 
ಜಿಲ್ಲೆ

ಪುರಾಣ ಆಲಿಕೆಯಿಂದ ಶಾಂತಿ-ನೆಮ್ಮದಿ ಪ್ರಾಪ್ತಿ

ರುದ್ರಪ್ಪ ವಾಲಿ

ಸಿರಿಗೇರಿ: ಶಿವ ಶರಣರ ಜೀವನವನ್ನು ಪುರಾಣ, ಕಥೆಗಳ ಮೂಲಕ ಕೇಳುವುದರಿಂದ ಶಾಂತಿ-ನೆಮ್ಮದಿ ಸಿಗುತ್ತದೆ ಎಂದು ಶ್ರೀಧರಗಡ್ಡೆಯ ಮರಿಕೊಟ್ಟೂರು ಸ್ವಾಮೀಜಿ ಹೇಳಿದರು.

ಶ್ರಾವಣಮಾಸದ ಅಂಗವಾಗಿ ಶ್ರೀ ನಾಗನಾಥೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಶ್ರೀ ಸಿದ್ಧಾರೂಢ ಭಾರತಿ ಸ್ವಾಮೀಜಿಗಳ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಿಳೆಯರು ಟಿವಿ ಸೀರಿಯಲ್‌ಗಳನ್ನು ನೋಡುವುದನ್ನು ಬಿಟ್ಟು ತಿಂಗಳ ಕಾಲ ಸುಕ್ಷೇತ್ರಕ್ಕೆ ಬಂದು ಪುರಾಣ ಆಲಿಸಬೇಕು ಎಂದರು. ಪುರಾಣ ಪ್ರವಚನಕಾರ ಬಳೂಟಗಿಯ ಸಿದ್ದೇಶ್ವರ ಶಾಸ್ತ್ರಿ ಹಿರೇಮಠ, ಸಂಗೀತಗಾರರಾದ ಹನುಮಂತ ಕುಮಾರ್ ಗವಾಯಿಗಳು, ತಬಲಾವಾದಕರಾದ ಶಾಂತವೀರಯ್ಯ ಹಿರೇಮಠ ಪುರಾಣ ಕಾರ್ಯಕ್ರಮ ನಡೆಸಿಕೊಟ್ಟರು. ದೇವಸ್ಥಾನದ ಧರ್ಮದರ್ಶಿ ಮಹಾರುದ್ರಗೌಡ, ಪ್ರಮುಖರಾದ ಭೀಮನಗೌಡ, ಸಿ.ಎಂ.ಚನ್ನಯ್ಯ ಸ್ವಾಮಿ, ತೇಜಾಮೂರ್ತಿ ಇತರರಿದ್ದರು.