ಹುಬ್ಬಳ್ಳಿ: ಇಲ್ಲಿನ ನವನಗರ ಕೆಸಿಸಿ ಬ್ಯಾಂಕ್ ಕಾಲನಿ ರಾಘವೇಂದ್ರ ಬಟವಿ ಅವರ ನಿವಾಸದಲ್ಲಿ ಮೇ 30ರಿಂದ ಜೂನ್ 5ರ ವರೆಗೆ ಶ್ರೀಮದ್ ಭಾಗವತ ದಶಮ ಸ್ಕಂದ ಪುರಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಿತ್ಯ ಸಂಜೆ 6ಕ್ಕೆ ಪಂ. ವೆಂಕಟೇಶ ಆಚಾರ್ಯ ಕೊರ್ಲಹಳ್ಳಿ ಅವರು ಪ್ರವಚನ ನೀಡಲಿದ್ದಾರೆ. ಆಸಕ್ತರು ಪುರಾಣ ಶ್ರವಣ ಮಾಡಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.