ಜಿಲ್ಲೆ

ಗೊಂಬೆಯಾಟ ಪ್ರದರ್ಶನ 12ರಿಂದ

ಮಂಜುನಾಥ ಅಂಗಡಿ

ಧಾರವಾಡ: ನಗರದ ಗೊಂಬೆಮನೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗಾಯಣ ಸಹಯೋಗದಲ್ಲಿ ಗೊಂಬೆಯಾಟ ತಜ್ಞ ನಾಡೋಜ ಬೆಳಗಲ್ ವೀರಣ್ಣ ಸ್ಮರಣಾರ್ಥ ಛಾಯಾಚಲನೆ' ಶೀರ್ಷಿಕೆಯಡಿ ಸೆ. 12ರಿಂದ 14ರವರೆಗೆ ಗೊಂಬೆಯಾಟ ಕಾಯಾಗಾರ ಹಾಗೂ ಸೆ. 15ರಿಂದ 17ರವರೆಗೆ ಗೊಂಬೆಗಳ ಪ್ರದರ್ಶನ ಆಯೋಜಿಸಲಾಗಿದೆ ಎಂದು ಗೊಂಬೆಮನೆ ಅಧ್ಯಕ್ಷ ಡಾ. ಪ್ರಕಾಶ ಗರುಡ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾನಾಡಿದ ಅವರು, ೧೨ರಂದು ಬೆಳಗ್ಗೆ ೧೧ಕ್ಕೆ ರಂಗಾಯಣದ ಸಾಂಸ್ಕೃತಿಕ ಸಮುಚ್ಛಯ ಭವನದಲ್ಲಿ ಬೊಂಬೆಯಾಟ ಕಾಯಾಗಾರಕ್ಕೆ ಡಾ. ಶಶಿಧರ ನರೇಂದ್ರ ಚಾಲನೆ ನೀಡುವರು. ೧೫ರಂದು ಬೆಳಗ್ಗೆ ೧೦ಕ್ಕೆ ಪಂ. ಬಸವರಾಜ ರಾಜಗುರು ಬಯಲು ರಂಗಮAದಿರದಲ್ಲಿ ನಡೆಯುವ ಗೊಂಬೆಗಳ ಪ್ರದರ್ಶನಕ್ಕೆ ಹಿರಿಯ ಚಿತ್ರಕಲಾವಿದೆ ಗಾಯತ್ರಿ ದೇಸಾಯಿ ಚಾಲನೆ ನೀಡುವರು ಎಂದರು. ಸೆ. ೧೬ರ ಸಂಜೆ ೭ಕ್ಕೆ ಗೊಂಬೆಯÁಟಕ್ಕೆ ಪದ್ಮಶ್ರೀ ಪಂ. ವೆಂಕಟೇಶಕುಮÁರ ಚಾಲನೆ ನೀಡುವರು. ಬಿ.ವಿ. ಮಲ್ಲಿಕಾರ್ಜುನ ಬೆಳಗಲ್ ನಿರ್ದೇಶನದ ದಾಸಶ್ರೇಷ್ಠ ಕನಕದಾಸರಮುತ್ತು ಬಂದಿದೆ ಕೇರೆಗೆ' ಗೊಂಬೆಯಾಟ ಪ್ರದರ್ಶನವನ್ನು ಬಳ್ಳಾರಿ ಮನುಕುಲ ಆಶ್ರಮ ಟ್ರಸ್ಟ್ ಪ್ರಸ್ತುಪಡಿಸಲಿದೆ ಎಂದರು.
ಸೆ. ೧೭ರಂದು ಸಂಜೆ ೭ಕ್ಕೆ ಕಂದಗಲ್ ಹನುಮಂತರಾಯರ ಕಂಪನಿ ನಾಟಕ `ಅದ್ಭುತ ರಾಮಾಯಣ' ಗೊಂಬೆಯಾಟವನ್ನು ಡಾ. ಪ್ರಕಾಶ ಗರುಡ ಹಾಗೂ ರಜನಿ ಗರುಡ ಪ್ರಸ್ತುತಪಡಿಸುವರು ಎಂದರು.