ಶರನವರಾತ್ರಿ ಹಿನ್ನ್ನೆಲೆಯಲ್ಲಿ ಗುರುವಾರ ಹುಲಿಕೆರೆ ಗ್ರಾಮದಲ್ಲಿರುವ ಬಿಜಿಎಸ್ ಬಾಲ ಜಗತ್ ಶಾಲೆಯಲ್ಲಿ ಬೊಂಬೆ ಪ್ರದರ್ಶನಕ್ಕೆ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಕಾರ್ಯದರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.  
ಜಿಲ್ಲೆ

ಬಿಜಿಎಸ್ ಬಾಲಜಗತ್ ಶಾಲೆಯಲ್ಲಿ ಬೊಂಬೆ ಪ್ರದರ್ಶನ

ಲೋಕೇಶ್ ಮನು. ಡಿ

ಕೆ.ಆರ್.ಸಾಗರ: ದಸರಾ ಹಬ್ಬದ ಶರನವರಾತ್ರಿ ಪ್ರಾರಂಭದ ಹಿನ್ನ್ನೆಲೆಯಲ್ಲಿ ಗುರುವಾರ ಹುಲಿಕೆರೆ ಗ್ರಾಮದಲ್ಲಿರುವ ಬಿಜಿಎಸ್ ಬಾಲಜಗತ್ ಶಾಲೆಯಲ್ಲಿ ರಾಜ-ರಾಣಿ ಬೊಂಬೆ ಸಮೇತ ನಾಲ್ಕು ನೂರಕ್ಕೂ ಹೆಚ್ಚು ಬೊಂಬೆಗಳನ್ನು ಜೋಡಿಸಿ ಪೂಜೆ ಸಲ್ಲಿಸಲಾಯಿತು.


ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಕಾರ್ಯದರ್ಶಿ ಶ್ರೀಸೋಮೇಶ್ವರನಾಥ ಸ್ವಾಮೀಜಿ ಬೊಂಬೆ ಪ್ರದರ್ಶನಕ್ಕೆ ಪೂಜೆ ಸಲ್ಲಿಸಿ, ನವರಾತ್ರಿ ಮಹತ್ವ ಮತ್ತು ಬೊಂಬೆಗಳ ಪ್ರದರ್ಶನ ಕುರಿತು ಶಾಲಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ನಂತರ ಬೊಂಬೆಗಳನ್ನು ವೀಕ್ಷಣೆ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದರು.


ಶಾಲೆಯ ಮುಖ್ಯಶಿಕ್ಷಕಿ ವಿ.ಆಶಾ, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.