ಜಿಲ್ಲೆ

ಪುಣ್ಯಸ್ಮರಣಾರಾಧನೆ 30ರಂದು

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ತಾಲೂಕಿನ ಶೇಡಬಾಳ, ಖಾನಾಪುರ ಗ್ರಾಮದ ಆತ್ಮವಿದ್ಯಾ ಪರಿಶೀಲನ ಆಶ್ರಮ ಟ್ರಸ್ಟ್​ ವತಿಯಿಂದ ಶ್ರೀ ಶ್ರೀಧರಾನಂದ ಸ್ವಾಮೀಜಿ ಅವರ 22ನೇ ಪುಣ್ಯಸ್ಮರಣಾರಾಧನೆ ಸಮಾರಂಭವನ್ನು ಜ. 30ರಂದು ಆಶ್ರಮದಲ್ಲಿ ಏರ್ಪಡಿಸಲಾಗಿದೆ.

ಜ. 30ರಂದು ಬೆಳಗ್ಗೆ 6 ಗಂಟೆಗೆ ಶಿವಯೋಗ ಸಮಾಧಿ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾಪೂಜೆ ಜರುಗಲಿದೆ. ಸಂಜೆ 5.30ಕ್ಕೆ ಗುರುಸ್ಮರಣೆ ನಡೆಯಲಿದ್ದು, ಆತ್ಮಾನಂದ ಆಶ್ರಮದ ಶ್ರೀ ಸಮರ್ಥ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹಿರಿಯ ಪತ್ರಕರ್ತ ಮೋಹನ ಹೆಗಡೆ ಕಾರ್ಯಕ್ರಮ ಉದ್ಘಾಟಿಸುವರು. ಶ್ರೀಧರ ಮುರಾಳೆ ಅವರು ಧ್ಯಾನ, ಆತ್ಮಜ್ಞಾನ ಕುರಿತು ಉಪನ್ಯಾಸ ನೀಡುವರು. ಪ್ರೇಮಕ್ಕ ಹೊರಟ್ಟಿ ಅವರು ಇಂಗ್ಲಿಷ್​ಗೆ ಅನುವಾದಿಸಿದ "ಸದ್ಗುರು ಶ್ರೀಧರಾನಂದ ಸ್ವಾಮೀಜಿಯವರ ಪವಿತ್ರವಾಣಿ' ಪುಸ್ತಕ ಬಿಡುಗಡೆ ಮಾಡಲಾಗುವುದು.

ಫೆ. 12ರಂದು ಭಾರತ ಹುಣ್ಣಿಮೆ ನಿಮಿತ್ತ ಧ್ಯಾನ ಮಂದಿರದ 40ನೇ ವಾರ್ಷಿಕೋತ್ಸವ ಮತ್ತು ಆತ್ಮವಿದ್ಯಾಭ್ಯಾಸಿಗಳ ಸಮ್ಮಿಲನ ಕಾರ್ಯಕ್ರಮ ನಡೆಯಲಿದೆ. ಅಂದು ಸಂಜೆ 5.30ಕ್ಕೆ ಪ್ರೊ. ಶಂಭು ಹೆಗಡಾಳ ಅವರು ಆತ್ಮವಿದ್ಯೆ ಕುರಿತು ಉಪನ್ಯಾಸ ನೀಡುವರು. ಅತಿಥಿಗಳಾಗಿ ಶಿವಲೀಲಾ ಕುಲಕರ್ಣಿ, ರಮಜಾನ ದರ್ಗಾ ಅತಿಥಿಗಳಾಗಿ ಆಗಮಿಸುವರು. ಡಾ. ಗೋವಿಂದ ಮಣ್ಣೂರ ಅಧ್ಯಕ್ಷತೆ ವಹಿಸುವರು. ಸಂಜೆ 7 ಗಂಟೆಗೆ ಮಹಾ ಪೂಜೆ, ಮಹಾಮಂಗಳಾರತಿ ನಡೆಯಲಿದೆ ಎಂದರು.