ಬೆಂಗಳೂರಿನಲ್ಲಿ ಡಾ.ವಿಷ್ಣುವರ್ಧನ ಅವರ ಪುಣ್ಯಭೂಮಿ ನೆಲಸಮ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಡಾ.ವಿಷ್ಣು ಸೇನಾ ಸಮಿತಿ ತಾಲೂಕು ಪದಾಧಿಕಾರಿಗಳು ತಹಸೀಲ್ದಾರ್ ವಿ.ಕೆ.ನೇತ್ರಾವತಿಗೆ ಮನವಿ ಸಲ್ಲಿಸಿದರು. ಸಮಿತಿ ತಾಲೂಕು ಅಧ್ಯಕ್ಷ ಎಂ.ಕರೇಗೌಡ, ಪ್ರಮುಖರಾದ ಸುಧಾಕರ, ಜಿ.ನಾಗರಾಜ, ರವಿ ನಿಂಬಳಗೆರೆ, ಮಲಿಯಪ್ಪ, ಮಹಾಂತೇಶ, ಮಲ್ಲೇಶ, ಲೋಕೇಶ್, ಸಾದಿಕ್, ರಹಿಮಾನ್, ನಾಗೇಶ್, ರಾಜ್, ತಿಪ್ಪೇಶ, ಮಧುಕುಮಾರಿ ಇತರರಿದ್ದರು. 
ಜಿಲ್ಲೆ

ಪುಣ್ಯಭೂಮಿ ನೆಲಸಮ ಮಾಡಿದ್ದು ಸರಿಯಲ್ಲ

ರುದ್ರಪ್ಪ ವಾಲಿ

ಕೂಡ್ಲಿಗಿ: ಗಳೂರಿನಲ್ಲಿ ಡಾ.ವಿಷ್ಣುವರ್ಧನ ಅವರ ಪುಣ್ಯಭೂಮಿ ನೆಲಸಮ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಸ್ಮಾರಕ ಮರು ನಿರ್ಮಿಸಬೇಕೆಂದು ಡಾ.ವಿಷ್ಣು ಸೇನಾ ಸಮಿತಿ ತಾಲೂಕು ಪದಾಧಿಕಾರಿಗಳು ತಹಸೀಲ್ದಾರ್ ವಿ.ಕೆ.ನೇತ್ರಾವತಿಗೆ ಮನವಿ ಸಲ್ಲಿಸಿದರು.

ಸಮಿತಿ ಸದಸ್ಯ ನೀರ್ಕಲ್ ಅಜೇಯ್ ಮಾತನಾಡಿ, ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ಡಾ.ವಿಷ್ಣುವರ್ಧನ ಅವರ ಪುಣ್ಯಭೂಮಿ ನೆಲಸಮ ಮಾಡಿದ್ದು ಖಂಡನೀಯ. ಸಾಂಸ್ಕೃತಿಕ ನಾಯಕನಿಗೆ ಅವಮಾನವಾಗಿದೆ. ಕನ್ನಡ ನಾಡು, ನುಡಿಗೆ ಚಿತ್ರರಂಗದ ಮೂಲಕ ಅನುಪಮ ಸೇವೆ ಸಲ್ಲಿಸಿದ ನಟನಿಗೆ ಅಪಮಾನವಾಗಿದೆ.

ಇದರಿಂದ ರಾಜ್ಯಾದ್ಯಂತ ವಿಷ್ಣು ಅಭಿಮಾನಿಗಳಿಗೆ ತೀವ್ರವಾದ ನೋವಾಗಿದೆ. ಇದಕ್ಕೆ ಸರ್ಕಾರವೇ ನೇರ ಹೊಣೆಯಾಗಿದೆ. ಸ್ಮಾರಕ ಮಾಡದೆ ಹೋದಲ್ಲಿ ರಾಜ್ಯಾದ್ಯಂತ ಹೊರಾಟ ಮಾಡಲಾಗುವುದು ಎಂದರು.