ಸೋಮವಾರಪೇಟೆ: ಗಾಯಗೊಂಡಿದ್ದ ಪುನುಗು ಬೆಕ್ಕನ್ನು ರೈತರೊಬ್ಬರು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಬಳಗುಂದ ಗ್ರಾಮದ ಬಿ.ಸಿ.ಸುರೇಂದ್ರ ಅವರ ಮನೆಗೆ ಅಪರೂಪದ ಪುನುಗು ಬೆಕ್ಕು ಬಂದು ಸೇರಿಕೊಂಡಿತ್ತು. ಕಾಡಿಗೆ ಕಳುಹಿಸುವ ಪ್ರಯತ್ನ ಮಾಡಿದರೂ, ಮಾರನೇ ದಿನವೂ ವಾಪಸ್ ಮನೆಗೆ ಬಂದಿದೆ. ಪುನುಗು ಬೆಕ್ಕಿನ ಕುತ್ತಿಗೆ ಭಾಗದಲ್ಲಿ ಗಾಯ ಗಮನಿಸಿದ ಸುರೇಂದ್ರ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬೇಳೂರು ಉಪವಲಯದ ಡಿಆರ್‌ಎಫ್‌ಒ ನಾರಾಯಣ ಮೂಲ್ಯ ಮತ್ತು ಸಿಬ್ಬಂದಿ ಪುನಗು ಬೆಕ್ಕಿಗೆ ಚಿಕಿತ್ಸೆ ಕೊಡಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.