ಜಿಲ್ಲೆ

ಅಕ್ರಮವಾಗಿ ಮದ್ಯ ಮಾರುತ್ತಿದ್ದ ಅಪರಾಧಿಗೆ ಶಿಕ್ಷೆ-ದಂಡ

ವಿಜಯಪುರ: ಅಕ್ರಮವಾಗಿ ಮದ್ಯ ಸಂಗ್ರಹಿಟ್ಟು ಮಾರುತ್ತಿದ್ದ ಅಪರಾಧಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ರೂಪಾಯಿ ದಂಡ ವಿಧಿಸಿ ಇಲ್ಲಿನ ಜೆಎಂಎಫ್‌ಸಿ ಮೂರನೇ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಇಂಗನಾಳ ಗ್ರಾಮದ ಪರಸಪ್ಪ ಶಂಕ್ರಪ್ಪ ವಾಲಿಕಾರ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ ಮನೆಯಲ್ಲಿ ಮದ್ಯ ಸಂಗ್ರಹಿಸಿ ಇಟ್ಟಿದ್ದನೆಂಬ ಮಾಹಿತಿ ಆಧರಿಸಿ 2021 ಡಿ.10 ರಂದು ಅಬಕಾರ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ 23.580 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿತ್ತು. ಅಲ್ಲದೇ, ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 32.34ರ ಅಡಿಯಲ್ಲಿ ಅಂದಿನ ಅಬಕಾರಿ ನಿರೀಕ್ಷಕ ಮಹೇಶ ನಿಂಗರೆಡ್ಡಿ ಪ್ರಕರಣ ದಾಖಲಿಸಿದ್ದರು. ಅಬಕಾರಿ ಉಪ ನಿರೀಕ್ಷಕ ಎನ್.ಎ. ಬಾರಾಗಣಿ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ಕೈಗೆತ್ತಿಕೊಂಡ ಜೆಎಂಎಫ್‌ಸಿ ಮೂರನೇ ನ್ಯಾಯಾಲಯದ ನ್ಯಾಯಾಧೀಶೆ ಸ್ಮಿತಾ ಮಹಾವೀರ ಮಾಲಗಾಂವಿ ನ.11ರಂದು 2 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರ ಸಹಾಯಕ ಅಭಿಯೋಜಕ ವಿಶ್ವನಾಥ ಪಾಟೀಲ ವಾದ ಮಂಡಿಸಿದ್ದರು.