ಜಿಲ್ಲೆ

ಪತ್ನಿ, ಮಾವನಿಗೆ ಇರಿದವನಿಗೆ ಶಿಕ್ಷೆ

ಉಪ್ಪಿನಂಗಡಿ: ಪತ್ನಿ ಮತ್ತು ಮಾವನಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಪ್ರಕರಣದಲ್ಲಿ ಬಂಧಿತ ಹಕೀಂ ಎಂಬುವನಿಗೆ ಬೆಳ್ತಂಗಡಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಹಕೀಂ, ಪತ್ನಿ ಸಾಜಿರಾ ಎಂಬಾಕೆ ಕಣಿಯೂರಿನ ತನ್ನ ತವರು ಮನೆಯಲ್ಲಿ ಮಗುವಿಗೆ ಆಹಾರ ಉಣಿಸುತ್ತಿದ್ದಾಗ ಮನೆಗೆ ಆಗಮಿಸಿದ ಹಕೀಂ ಪತ್ನಿಗೆ ಚೂರಿಯಿಂದ ತಿವಿದು ಗಾಯಗೊಳಿಸಿದ್ದ. ಮಗಳ ರಕ್ಷಣೆಗೆ ಧಾವಿಸಿದ ಮಾವ ಮೊಹಮ್ಮದ್​ ಅವರಿಗೂ ಚೂರಿಯಿಂದ ತಿವಿದು ಗಾಯಗೊಳಿಸಿದ್ದ. ಉಪ್ಪಿನಂಗಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್​ಐ ಅವಿನಾಶ್​ ಎಚ್​. ಮತ್ತು ಎಎಸ್​ಐ ಸುಧಾಕರ್​ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಜುಲೈ 26ರಂದು ನಡೆದ ಪ್ರಕರಣದ ತ್ವರಿತ ವಿಚಾರಣೆ ನಡೆಸಿ ಡಿಸೆಂಬರ್​ ಮೊದಲ ವಾರದಲ್ಲಿ ಅಪರಾಧಿಗೆ ಶಿೆ ವಿಧಿಸಿರುವುದು ಗಮನ ಸೆಳೆದಿದೆ.