ಬದಾಮಿ ತಾಲೂಕು ಉಗಲವಾಟ ಗ್ರಾಮದ ಕುರಿಗಾಹಿ ಯುವಕ ಶರಣಪ್ಪ ಜಮ್ಮನಕಟ್ಟಿ ಕೊಲೆ ಮಾಡಿದ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ನಿಡಗುಂದಿಯಲ್ಲಿ ರಾಜ್ಯ ಕುರುಬರ ಸಂಘದ ತಾಲೂಕು ಯುವ ಘಟಕದಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ರಮೇಶ ಮಾಗಿ, ಮುಖಂಡರಾದ ಪರಶುರಾಮ ಕಾರಿ, ಬಸವರಾಜ ಹೆರಕಲ್, ನಾರಾಯಣ ಹುಗ್ಗಿ, ಬಸು ಕುರಿ, ಮುತ್ತುರಾಜ ಹಾಲಿಯಾಳ, ಶಂಕರ ಜಲ್ಲಿ, ಸೀತಪ್ಪ ಗಣಿ, ಯಲಗೂರೇಶ ಮೇಟಿ ಇತರರಿದ್ದರು. 
ಜಿಲ್ಲೆ

ಕೊಲೆ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಿ

ದತ್ತಾತ್ರೇಯ ಪಿ ಕುಲಕರ್ಣಿ

ನಿಡಗುಂದಿ: ಬದಾಮಿ ತಾಲೂಕು ಉಗಲವಾಟ ಗ್ರಾಮದ ಕುರಿಗಾಹಿ ಯುವಕ ಶರಣಪ್ಪ ಜಮ್ಮನಕಟ್ಟಿಯನ್ನು ಕೊಲೆ ಮಾಡಿದ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ರಾಜ್ಯ ಕುರುಬರ ಸಂಘದ ತಾಲೂಕು ಯುವ ಘಟಕದ ಕಾರ್ಯಕರ್ತರು ತಹಸೀಲ್ದಾರ್ ಎ.ಡಿ. ಅಮರವಾದಗಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಕುರಿಗಳ ಕಳ್ಳತನ ಮಾಡಲು ಬಂದ ಮೂವರು ದುಷ್ಕರ್ಮಿಗಳನ್ನು ಹಿಂಬಾಲಿಸಿದ ಶರಣಪ್ಪ ಜಮ್ಮನಕಟ್ಟಿ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೊಲೆಗಡುಕರನ್ನು ಬಂಧಿಸಿ ಗಲ್ಲು ಶಿಕ್ಷೆಗೊಳಪಡಿಸಬೇಕು. ಶರಣಪ್ಪ ಕುಟುಂಬಕ್ಕೆ ಸರ್ಕಾರ ನೆರವಿಗೆ ಬರಬೇಕು. ಕುಟುಂದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು. ಕುರಿಗಾರ ಅಭಿವೃದ್ಧಿ ನಿಗಮ ಸ್ಥಾಪಿಸಿ 500 ಕೋಟಿ ರೂ. ಹಣ ಮೀಸಲಿಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ತಾಲೂಕು ಕುರುಬರ ಸಂಘದ ಯುವ ಘಟಕದ ಅಧ್ಯಕ್ಷ ರಮೇಶ ಮಾಗಿ, ಮುಖಂಡರಾದ ಪರಶುರಾಮ ಕಾರಿ, ಬಸವರಾಜ ಹೆರಕಲ್, ನಾರಾಯಣ ಹುಗ್ಗಿ, ಬಸು ಕುರಿ, ಮುತ್ತುರಾಜ ಹಾಲಿಯಾಳ, ಶಂಕರ ಜಲ್ಲಿ, ಸೀತಪ್ಪ ಗಣಿ, ಯಲಗೂರೇಶ ಮೇಟಿ, ಜಾನು ಸಿದ್ಧನಾಥ, ವಿನಾಯಕ ವಂದಾಲ, ಅರ್ಜುನ ದಳವಾಯಿ, ಸಂಗಪ್ಪ ಸೀತಿಮನಿ, ಮುದ್ದಪ್ಪ ಯಳ್ಳಿಗುತ್ತಿ, ನಾಗರಾಜ ಗುಡಿಹಾಳ, ಬಸವರಾಜ ಹುಗ್ಗಿ ಇದ್ದರು.