ಚಿತ್ರನಟ ದಿ.ಪುನೀತ್ ರಾಜ್‌ಕುಮಾರ್ ಸಂಸ್ಮರಣೆ ಕಾರ್ಯಕ್ರದಲ್ಲಿ ಬಿ.ಪರಮೇಶ್, ಯಲ್ಲಪ್ಪ, ಕೇಶವಮೂರ್ತಿ, ಮಧು, ಮಯೂರ ನಾಯ್ಕ, ಹರೀಶ್, ಸತೀಶ್ ಇತರರಿದ್ದರು. 
ಜಿಲ್ಲೆ

ಪುನೀತ್ ಅಕಾಲಿಕ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟ

ಅರಸೀಕೆರೆ: ಕನ್ನಡ ಸಿನಿ ಲೋಕದ ಅಪರೂಪದ ತಾರೆ ದಿ.ಪುನೀತ್ ರಾಜ್‌ಕುಮಾರ್ ಅಕಾಲಿಕ ನಿಧನ ಚತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಪ್ರತಿನಿಧಿ ಬಿ.ಪರಮೇಶ್ ಹೇಳಿದರು.

ಸುಬ್ರಮಣ್ಯನಗರ ಬಡಾವಣೆಯಲ್ಲಿ ದಿ.ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಭಾನುವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಿನಿಮಾ ಜತೆ ಜತೆಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಯುವ ನಟ ಚಿತ್ರರಂಗಕ್ಕೆ ತನ್ನದೇ ಕೊಡುಗೆ ನೀಡಿದ್ದಾರೆ. ಆದ್ದರಿಂದಲೆ ವಿವಿಧ ಸಂಘ, ಸಂಸ್ಥೆಗಳು ರಾಜ್ಯದ ಉದ್ದಗಲಕ್ಕೂ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ ಎಂದು ಹೇಳಿದರು.
ಮುಖಂಡರಾದ ಯಲ್ಲಪ್ಪ, ಕೇಶವಮೂರ್ತಿ, ಮಧು, ಮಯೂರನಾಯ್ಕ, ಹರೀಶ್, ಸತೀಶ್ ಸೇರಿ ಹಲವರು ನೇತೃತ್ವ ವಹಿಸಿದ್ದರು. ಹಲವು ರೋಗಿಗಳಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.