ನೆಲಮಂಗಲ : ಪುನೀತ್ ರಾಜ್ಕುಮಾರ್ ಅವರು ನಾಡು, ನುಡಿ, ಕಲೆ, ಸಾಂಸತಿಕ ಪರಂಪರೆಯ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದ ಪ್ರತಿಭಾವಂತ ನಟರಾಗಿದ್ದು, ಅವರ ಸಮಾಜಮುಖಿ ಕಾರ್ಯಗಳು ಇಂದಿಗೂ ಜೀವಂತವಾಗಿವೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷ
ಜಿ.ಆರ್.ನಾಗರಾಜು ತಿಳಿಸಿದರು.
ಡಾ.ಪುನೀತ್ ರಾಜ್ಕುಮಾರ್ ಅವರ 4ನೇ ಪುಣ್ಯಸ್ಮರಣೆ ಪ್ರಯುಕ್ತ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ರೋಟರಿ ಸಂಸ್ಥೆಯಿಂದ ಉಚಿತ ಹಣ್ಣು ಹಂಪಲು ವಿತರಿಸಿ ಮಾತನಾಡಿದರು. ಪುನೀತ್ ರಾಜಕುಮಾರ್ ಕನ್ನಡ ಚಿತ್ರರಂಗದ ಆದರ್ಶ ನಟರಾಗಿದ್ದು, ಯುವ ಸಮುದಾಯಕ್ಕೆ ಸ್ಫೂರ್ತಿಯಾಗಿದ್ದಾರೆ. ಅವರ ಅಗಲಿಕೆ ರಾಜ್ಯದ ಜನರಿಗೆ ತುಂಬಲಾಗದ ನೋವಾಗಿದೆ. ಅವರ ಸಮಾಜ ಮುಖಿ ಕಾರ್ಯಕ್ರಮಗಳಿಂದ ಪ್ರೇರಣೆಗೊಂಡ ಸಾಕಷ್ಟು ಅಭಿಮಾನಿಗಳು ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ ಎಂದರು. ವೈದ್ಯಾಧಿಕಾರಿ ಡಾ.ಸೋನಿಯಾ ಮಾತನಾಡಿ, ರೋಟರಿ ಸಂಸ್ಥೆ ಸಮಾಜದ ಏಳಿಗೆ ಶ್ರಮಿಸುತ್ತಿರುವುದು ಸಂಸತದ ಸಂಗತಿ. ನಗರದ ಸಾರ್ವಜನಿಕ ಆಸ್ಪತ್ರೆಗೆ ರೋಟರಿಯಿಂದ ಅನುಕೂಲವಾಗಿದೆ ಎಂದು ಹೇಳಿದರು. ನಿಯೋಜಿತ ಅಧ್ಯಕ್ಷ ಲೋಕೇಶ್, ನಿರ್ದೇಶಕ ಶಿವಶಂಕರ್ಪ್ರಸಾದ್, ಶಿವರಾಮಯ್ಯ, ಸೋಮಶೇಖರ್, ಆರ್.ನಾಗರಾಜು, ಸುಶೀಲ್, ಮುನಿರಾಜು, ರುದ್ರೇಗೌಡ ಇತರರು ಇದ್ದರು.