ಎನ್.ಆರ್.ಪುರ: ಪುನೀತ್ ರಾಜ್‌ಕುಮಾರ್ ಅವರ 50ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಅವರ ಸೇವೆ ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಬಿ.ಎಚ್.ಕೈಮರ ಸಮೀಪದ ಕೋಗಳ್ಳಿ ಅಪ್ಪು ಅಭಿಮಾನಿ ಬಳಗದ ಮುಖ್ಯಸ್ಥ ಮಹೇಶ್ ಹೇಳಿದರು. ಮತ್ತಿಮರ ಅನಾಥಾಶ್ರಮಲ್ಲಿ ಕೋಗಳ್ಳಿ ಆನಾಥರಿಗೆ ಹಬ್ಬದ ಸಿಹಿಊಟ ನೀಡಿ ಮಾತನಾಡಿ, ಅಪ್ಪು ಹುಟ್ಟು ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಬೇಕು ಎಂಬ ಉದ್ದೇಶದಿಂದ ಇಂದು ಅನಾಥಾಶ್ರಮದಲ್ಲಿ ಸಿಹಿ ಊಟ ನೀಡಲಾಗಿದೆ ಎಂದರು. ಕಲಾವಿದ ಅಭಿನವ ಗಿರಿರಾಜ್ ಮಾತನಾಡಿ, ಬಲಗೈಯಲ್ಲಿ ದಾನ ಮಾಡಿರುವುದು ಎಡಗೈಗೆ ಗೊತ್ತಾಗದ ರೀತಿಯಲ್ಲಿ ಸೇವೆ ಮಾಡಿದವರು ಪುನೀತ್ ರಾಜಕುಮಾರ್ ಎಂದರು. ಮತ್ತಿಮರ ಅನಾಥಾಶ್ರಮ ಮುಖ್ಯಸ್ಥೆ ಲಿಸ್ಸಿ ,ಕೋಗಳ್ಳಿಯ ಅಪ್ಪು ಬಳಗದ ಸದಸ್ಯರಾದ ಸುಮಂತ್, ಮಂಜುನಾಥ್, ಚೇತನ್, ಸಚಿನ್,ಸಂದೀಪ್, ಪ್ರಕಾಶ್, ಅನಾಥಾಶ್ರಮದ ವಿವೇಕ್ ಇದ್ದರು.