ಇಳಕಲ್ಲನ ಹುಚನೂರ-ನಾಗೂರ ರಸ್ತೆಯಲ್ಲಿನ ಶಾಮೀದ್ ರೇಶ್ಮಿ ಎಂಬುವವರ ಪಂಚರ್ ಶಾಪ್‌ಗೆ ತಗುಲಿದ ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕ ಸಿಬ್ಬಂದಿ.  
ಜಿಲ್ಲೆ

ಬೆಂಕಿ ತಗುಲಿ ಪಂಚರ್ ಶಾಪ್ ಭಸ್ಮ

ಇಳಕಲ್ಲ(ಗ್ರಾ): ನಗರದ ಹಿಂದು ರುದ್ರಭೂಮಿಯ ಹಿಂಭಾಗದಲ್ಲಿನ ಹುಚನೂರ-ನಾಗೂರ ರಸ್ತೆಯಲ್ಲಿನ ಶಾಮೀದ್ ರೇಶ್ಮಿ ಎಂಬುವವರ ಪಂಚರ್ ಶಾಪ್‌ಗೆ ಶನಿವಾರ ರಾತ್ರಿ 12 ಗಂಟೆಗೆ ಬೆಂಕಿ ತಗುಲಿ ಅಪಾರ ಹಾನಿಯಾಗಿದೆ.

ಬೆಂಕಿ ತಗುಲಿದ್ದನ್ನು ಗಮನಿಸಿದ ಸ್ಥಳೀಯರು ಮಾಲೀಕನಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮಾಲೀಕ ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ತಿಳಿಸಿ ಬೆಂಕಿ ನಂದಿಸಿದ್ದಾರೆ. ಇಳಕಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಎಸ್.ಆರ್. ನಾಯಕ ತನಿಖೆ ನಡೆಸಿದ್ದಾರೆ.