ಬಾಳೆಹೊನ್ನೂರು ಭದ್ರಾ ನದಿಯಲ್ಲಿ ನೀರಿನ ಹರಿವು ಏರಿಕೆಯಾಗಿರುವುದು. 
ಜಿಲ್ಲೆ

ಪುನರ್ವಸು ಮಳೆ ಅಬ್ಬರ

ಎಸ್.ಎನ್.ರವೀಂದ್ರ

ಬಾಳೆಹೊನ್ನೂರು: ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ಸಂಜೆಯಿಂದ ಪುನರ್ವಸು ಮಳೆ ಅಬ್ಬರಿಸುತ್ತಿದ್ದು, ಭಾನುವಾರವೂ ಭರ್ಜರಿ ಮಳೆಯಾಗಿದೆ.

ನಿರಂತರ ಮಳೆಯಿಂದಾಗಿ ಭದ್ರಾ ನದಿ, ಹಳ್ಳಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಗಾಳಿಯೂ ಜೋರಾಗಿ ಬೀಸಿದ್ದರಿಂದ ಕೆಲವೆಡೆ ಮರಗಳು ಬಿದ್ದಿವೆ. ಪಟ್ಟಣದಲ್ಲಿ ಭಾನುವಾರ ವಾರದ ಸಂತೆಯಾಗಿದ್ದು, ನಿರಂತರ ಮಳೆ ಪರಿಣಾಮ ವ್ಯಾಪಾರಕ್ಕೆ ತೊಂದರೆಯಾಗಿತ್ತು.