ಮಡಿಕೇರಿ: ಮಡಿಕೇರಿಯ ಮಂಗಳಾದೇವಿ ನಗರದಲ್ಲಿರುವ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಶ್ರೀ ರಾಜರಾಜೇಶ್ವರಿ, ಮಹಾಗಣಪತಿ ಹಾಗೂ ನಾಗದೇವರುಗಳ ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ಇತ್ತೀಚೆಗೆ ನೆರವೇರಿತು.
ಬ್ರಹ್ಮಶ್ರೀ ವೇದಮೂರ್ತಿ ಪೊಳಲಿ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು. ಪ್ರಾರ್ಥನೆ, ಪುಣ್ಯಾಹ, ಸಪ್ತಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತುಹೋಮ, ದಿಶಾಬಲಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.
ಪುಣ್ಯಾಹ, ಗಣಪತಿ ಹೋಮ, ಚಂಡಿಕಾ ಹೋಮ, ನವಕಲಶ ಪೂಜೆ, ಪ್ರಧಾನ ಹೋಮ, ನಾಗದೇವರಿಗೆ ತಂಬಿಲ ಪೂಜೆ, ಆಶ್ಲೇಷ ಬಲಿ, ಕಳಶಾಭಿಷೇಕ ಮಹಾಪೂಜೆ ನೆರವೇರಿತು. ನಂತರ ಸಾಯಂಪೂಜೆ, ರಂಗಪೂಜೆ, ಬಲಿ ಉತ್ಸವ, ರಾಜಾಂಗಣ ಪ್ರಸಾದ, ಪೀಠಪೂಜೆ, ಶುದ್ಧಿಕಲಶಾಭಿಷೇಕ, ಮಂತ್ರಾಕ್ಷತೆ ಜರುಗಿತು.
ನಗರದ ವಿವಿಧ ಬಡಾವಣೆಗಳಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ನೆರೆದಿದ್ದ ಭಕ್ತಾಧಿಗಳಿಗೆ ಎರಡು ದಿನಗಳ ಕಾಲ ಅನ್ನಸಂತರ್ಪಣೆ ನಡೆಯಿತು.