ಜಿಲ್ಲೆ

ಗ್ರಾಮಸಭೆಯಲ್ಲಿ ಪ್ರಶ್ನೆಗಳ ಸುರಿಮಳೆ - ತಾಲೂಕು ಮಟ್ಟದ ಅಽಕಾರಿಗಳಿಲ್ಲದ್ದಕ್ಕೆ ಅಸಮಾಧಾನ - ಸಮಸ್ಯೆ ನಿವಾರಣೆಗೆ ನಿರಾಸಕ್ತಿ ಆರೋಪ

Mangaluru - Nishantha Narayana


ವಿಟ್ಲ: ತಾಲೂಕು ಮಟ್ಟದ ಅಽಕಾರಿಗಳು ಯಾವುದೇ ಕೆಲಸ ಇಲ್ಲದ ದಿನ ಗ್ರಾಮಸಭೆ ಇಡಬೇಕು. ಭಿಕ್ಷುಕರ ಕರ ಸಂಗ್ರಹ ಮಾಡುವುದರಿಂದ ಮನೆಗೆ ಬರುವ ಭಿಕ್ಷುಕರನ್ನು ಪಂಚಾಯಿತಿಗೆ ಕಳುಹಿಸಬಹುದಲ್ವಾ. ಬಿದ್ದ ಕಂಬ ದುರಸ್ತಿಗೆ ಲೈನ್‌ಮನ್‌ಗಳು ಹೋಗುವುದಾ ಶಾಖಾಽಕಾರಿಗಳಾ ಎಂಬುದನ್ನು ಸ್ಪಷ್ಟ ಪಡಿಸಬೇಕು. ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ನಿರ್ಣಯ ಮಾಡಬೇಕು. ಈ ಮೂಲಕ ತಜ್ಞ ವೈದ್ಯರನ್ನು ಕರೆಸಿಕೊಳ್ಳಬೇಕು.

ಪುಣಚ ಗ್ರಾಮ ಪಂಚಾಯಿತಿಯ ೨೦೨೩-೨೪ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆಯಲ್ಲಿ ನಾಗರಿಕರಿಂದ ಕೇಳಿ ಬಂದ ಬೇಡಿಕೆಗಳಿವು.


ಗ್ರಾಮಸಭೆಗೆ ತಾಲೂಕು ಮಟ್ಟದ ಅಽಕಾರಿಗಳು ಸರಿಯಾಗಿ ಆಗಮಿಸದೆ, ಕಾರಣ ನೀಡುವುದೇ ಆಗುತ್ತಿದೆ. ಗ್ರಾಮಸಭೆಯ ನಿರ್ಣಯ ಅಂತಿಮ ಎಂದು ಹೇಳಲಾಗುತ್ತಿದೆಯಾದರೂ ತಾಲೂಕು ಮಟ್ಟದ ಅಽಕಾರಿ ವರ್ಗ ಸಭೆಗೆ ಸರಿಯಾಗಿ ಬರುತ್ತಿಲ್ಲ. ಕಾರ್ಯಕ್ರಮದ ಒತ್ತಡ ಇಲ್ಲದ ದಿನ ಗ್ರಾಮಸಭೆ ಇಡುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಯಿತು.


ಗ್ರಾಮದಲ್ಲಿ ನಿರ್ಗತಿಕರು ಸಮಸ್ಯೆಗೊಳಗಾಗಿ ಬಸ್ ನಿಲ್ದಾಣಗಳಲ್ಲಿ ದಿನಗಟ್ಟಲೆ ಇದ್ದರೂ ಕ್ರಮಕೈಗೊಳ್ಳುತ್ತಿಲ್ಲ. ಭಿಕ್ಷುಕರನ್ನು ಆಸ್ಪತ್ರೆಗೆ ಸಾರ್ವಜನಿಕರೆ ಸೇರ್ಪಡೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ಗ್ರಾಮಸ್ಥರಿಂದ ಸಂಗ್ರಹ ಮಾಡುವ ಭಿಕ್ಷುಕರ ಕರ ಪಂಚಾಯಿತಿ ಸ್ಥಗಿತ ಮಾಡಬೇಕು. ಕಂದಾಯ ಅಽನಿಯಮ ಪ್ರಕಾರ ಒಟ್ಟು ಜಮೀನಿನ ಶೇ.೧೦ರಷ್ಟು ಭೂಮಿಯಲ್ಲಿ ಮನೆ ಕಟ್ಟುವುದಕ್ಕೆ ಅವಕಾಶವಿದೆ. ಆದರೆ ಅಽಕಾರಿ ವರ್ಗ ೯/೧೧ರಲ್ಲಿ ಹೆಸರಿನಲ್ಲಿ ಜನರನ್ನು ಅಲೆದಾಡಿಸುವುದು ಸರಿಯಲ್ಲ. ಭೂ ಪರಿವರ್ತನೆಯಿಲ್ಲದೆ ಅಗತ್ಯ ವ್ಯವಸ್ಥೆಯನ್ನು ಮಾಡಲು ಅವಕಾಶ ನೀಡಬೇಕು ಎಂಬ ಆಗ್ರಹ ಕೇಳಿ ಬಂತು.


ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮಾತನಾಡಿ, ರೈತರ ಆಧಾರ್ ಜತೆಗೆ ಜಮೀನುಗಳನ್ನು ಜೋಡಿಸುವ ಕೆಲಸ ನಡೆಯುತ್ತಿದೆ. ಆದರೆ ರೈತರ ಸ್ವಾಽನ ಇರುವ ಸರ್ಕಾರಿ ಜಮೀನು ಹಾಗೂ ಕುಮ್ಕಿಯನ್ನು ಜೋಡಿಸದೆ ಸರ್ಕಾರಿ ಎಂದು ತೋರಿಸಿ, ರೈತರಿಗೆ ಸಮಸ್ಯೆ ಮಾಡಬಾರದು. ರಾಜ್ಯದ ಕೆಲವು ಭಾಗದಲ್ಲಿ ರೈತರ ಜಮೀನುಗಳನ್ನು ಅರಣ್ಯ ಎಂದು ಪರಿವರ್ತಿಸಿದ್ದು, ಈ ರೀತಿಯಲ್ಲಿ ಇಲ್ಲೂ ನಡೆಯದಂತೆ ಎಚ್ಚರ ವಹಿಸುವುದು ಉತ್ತಮ ಎಂದು ಹೇಳಿದರು.

ಪಂಚಾಯಿತಿ ಅಭಿವೃದ್ಧಿ ಅಽಕಾರಿ ರವಿ ಮಾತನಾಡಿ ಕಾಲು ಸಂಕ ಅಥವಾ ಕಾಲು ದಾರಿಯ ದುರಸ್ತಿಗೆ ೫೦ ಸಾವಿರ ಖರ್ಚು ಮಾಡಿದ ತಕ್ಷಣ ಆ ದಾರಿ ಪಂಚಾಯಿತಿಯದ್ದೆಂದು ಆಗುವುದಿಲ್ಲ. ಜನರ ಬೇಡಿಕೆಯನ್ನು ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಿಕೊಡುವ ಕೆಲಸ ನಡೆಯುತ್ತದೆ ಎಂದು ತಿಳಿಸಿದರು.


ಮಾರ್ಗದರ್ಶಿ ಅಽಕಾರಿಯಾಗಿ ವಿನಯ ಕುಮಾರಿ ಹಾಜರಿದ್ದರು. ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋದಾ ಯಾನೆ ಬೇಬಿ ವಹಿಸಿದ್ದರು. ಪಂಚಾಯಿತಿ ಸಿಬ್ಬಂದಿ ಪಾರ್ವತಿ ವರದಿ ವಾಚಿಸಿದರು. ಆರೋಗ್ಯ, ಕಂದಾಯ, ಸಮಾಜ ಕಲ್ಯಾಣ, ಶಿಕ್ಷಣ, ಕೃಷಿ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಕಾರಿಗಳು ಮಾಹಿತಿ ನೀಡಿದರು. ಪಂಚಾಯಿತಿ ಸದಸ್ಯರು ಹಾಜರಿದ್ದರು.


ಸುತ್ತೋಲೆಗೆ ಬೆಲೆ ಇಲ್ಲ
ಸಾಮಾಜಿಕ ಹೋರಾಟಗಾರ ವೆಂಕಟ್ರಮಣ ಪುಣಚ ಮಾತನಾಡಿ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಬಾರದ ಕೆಲವು ವರ್ಷಗಳಾಗಿದೆ. ಈ ಬಗ್ಗೆ ಅಗತ್ಯ ಕ್ರಮವನ್ನು ಇಲಾಖೆ ಕೈಗೊಳ್ಳಬೇಕಾಗಿದೆ. ಸಾರ್ವಜನಿಕ ಶೌಚಾಲಯಗಳ ಸಮರ್ಪಕ ನಿರ್ವಹಣೆ ಕಾರ್ಯ ನಡೆಯುತ್ತಿಲ್ಲ, ತೋರಣಕಟ್ಟೆ ನೆಲ್ಲಿಗುಡ್ಡೆ ಆಜೇರು ರಸ್ತೆ ಸರಿಪಡಿಸುವ ಬಗ್ಗೆ ವಿವಿಧ ಅಽಕಾರಿಗಳಿಗೆ ದೂರು ನೀಡಿದರೂ ಸರಿಪಡಿಸುವ ಕಾರ್ಯದಲ್ಲಿ ವಿಳಂಬ ಮಾಡಲಾಗುತ್ತಿದೆ. ತಕ್ಷಣ ವ್ಯವಸ್ಥೆ ಮಾಡುವ ಬಗ್ಗೆ ಹಿರಿಯ ಅಽಕಾರಿಗಳು ಹೇಳಿಕೊಂಡರೂ ಪಂಚಾಯಿತಿಯಲ್ಲಿ ಸುತ್ತೋಲೆಗೆ ಬೆಲೆ ಇಲ್ಲ ಎಂದು ಹೇಳಿದರು.