ಸವಣೂರ: ನಾಯಿ ಅಡ್ಡ ಬಂದಿದ್ದರಿಂದಬೈಕ್ ಸವಾರ ಕೆಳಗೆ ಬಿದ್ದು ಮೃತಪಟ್ಟ ಟನೆ ತಾಲೂಕಿನ ಬರದೂರ&ಚಳ್ಯಾಳ ರಸ್ತೆಯಲ್ಲಿ ಮಂಗಳವಾರ ನಡೆದಿದೆ.
ಬರದೂರ ಗ್ರಾಮದ ಹನುಮಂತಗೌಡ ಮಲಕನಗೌಡ ಮಣಗೌಡ್ರ (37) ಮೃತ ಬೈಕ್ ಸವಾರ.
ಈತ ಬೈಕ್ ಮೇಲೆ ತೆರಳುತ್ತಿದ್ದ ಸಮಯದಲ್ಲಿ ನಾಯಿ ಅಡ್ಡ ಬಂದಿದೆ. ಇದರಿಂದ ಒಮ್ಮೆಲೆ ಬ್ರೇಕ್ ಹಚ್ಚಿದ್ದರಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.