ಜಿಲ್ಲೆ

ಜೆಎಸ್‌ಎಸ್ ಬಡಾವಣೆಯಲ್ಲಿ ಶ್ರೀರಾಮನಿಗೆ ಪೂಜೆ, ಅನ್ನದಾನ

ಮೈಸೂರು: ಅಯೋಧ್ಯೆ ಶ್ರೀರಾಮ ಮಂದಿರದ ಉದ್ಘಾಟನೆ ಹಾಗೂ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಜೆಎಸ್‌ಎಸ್ ಬಡಾವಣೆಯಲ್ಲಿ ಭಕ್ತಿಪೂರ್ವಕವಾಗಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಜತೆಗೆ ಅನ್ನದಾನ ನೆರವೇರಿತು.

ಬಿಜೆಪಿ ಮುಖಂಡ ಡಿ.ಲೋಹಿತ್ ಮಾತನಾಡಿ, ಪವಿತ್ರ ರಾಮಮಂದಿರ ನಿರ್ಮಾಣದಲ್ಲಿ ಭಾರತದ ಸಾರ್ವಭೌಮತ್ವದ ಶಕ್ತಿ ಅಡಗಿದೆ. ಭಾರತೀಯತೆಯ ಸತ್ವ ಅಡಗಿದೆ. ರಾಮನ ಜನ್ಮಸ್ಥಾನದಲ್ಲೇ ರಾಮನಿಗೆ ನೆಲೆ ದೊರಕಿಸಿಕೊಡಲು ಸಾಧ್ಯವಾಗದಿದ್ದರೆ ಭವಿಷ್ಯದಲ್ಲಿ ನೈಜ ಭಾರತೀಯತೆಗೆ ನೆಲೆ ಉಳಿಸಲು ಅಸಾಧ್ಯ. ಹನುಮನೂರಿನಿಂದಲೇ ಬಾಲರಾಮನು ಅಯೋಧ್ಯೆ ಗುಡಿ ಬೆಳಗುತ್ತಿರುವುದು ನಿಜಕ್ಕೂ ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ಮೂರ್ತಿಯೇ ಪ್ರತಿಷ್ಠಾಪನೆಯಾಗಿರುವುದು ಖುಷಿಯ ಸಂಗತಿ ಎಂದರು.

ಮುಖಂಡರಾದ ಎಂ.ಮಹದೇವಸ್ವಾಮಿ, ಪರಶಿವಮೂರ್ತಿ, ಹೂಟಗಳ್ಳಿ ನಾಗರಾಜು, ನಾಗಭೂಷಣ್, ಮಾದಪ್ಪ ಸುತ್ತೂರು, ಬಸವಣ್ಣ, ರಾಜೇಂದ್ರ, ರಾಜಪ್ಪ, ಕುಮಾರ್, ಮಧುಸೂಧನ್, ದೊಡ್ಡಬುದ್ದಿ, ಕೃಷ್ಣ, ನಾಗೇಶ್, ಮಾದಪ್ಪ, ಸುರೇಶ್, ಮಹೇಶ್, ರಮೇಶ್, ಮಂಜು, ಮನೋಹರ ಇದ್ದರು.