ಜಿಲ್ಲೆ

ಬಡವರ ಅರ್ಜಿಗಳ ತ್ವರಿತ ವಿಲೇವಾರಿ - ಅಶೋಕ್ ರೈ ಕಿವಿಮಾತು - ಪೂಡಾ ಅಧ್ಯಕ್ಷರ ಅಽಕಾರ ಸ್ವೀಕಾರ

Mangaluru - Nishantha Narayana

ಪುತ್ತೂರು: ಗ್ರಾಮಾಂತರ ಪ್ರದೇಶಗಳ ೯/೧೧ ನೀಡುವ ಕೆಲಸ ನಡೆಯಬೇಕಿದ್ದು, ಯಾವುದೇ ಅರ್ಜಿ ಒಂದು ವಾರಕ್ಕಿಂತ ಹೆಚ್ಚು ಕಾಲ ಪೂಡಾ ಕಚೇರಿಯಲ್ಲಿ ಉಳಿಯಬಾರದು. ಅಽಕಾರಿಗಳು ವಾರದಲ್ಲಿ ಎರಡು ದಿನ ಮಾತ್ರ ಬರುತ್ತಿದ್ದು, ಉಳಿದ ದಿನಗಳಲ್ಲಿ ಸದಸ್ಯರ ಮುಖಾಂತರ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಪೂಡಾ ಅಧ್ಯಕ್ಷರ ಅಽಕಾರ ಸ್ವೀಕಾರ ಸಮಾರಂಭದಲ್ಲಿ ಅಭಿನಂಽಸಿ ಮಾತನಾಡಿದರು.

ಅಧ್ಯಕ್ಷರಾಗಿ ಅಽಕಾರ ಸ್ವೀಕರಿಸಿದ ಅಮಳ ರಾಮಚಂದ್ರ ಮಾತನಾಡಿ ಉತ್ತಮವಾಗಿ, ಭ್ರಷ್ಟಾಚಾರಕ್ಕೆ ಅವಕಾಶ ಅಗದಂತೆ ಶೇ.೧೦೦ರಷ್ಟು ಬದ್ಧವಾಗಿ ಅಽಕಾರ ನಡೆಸಲಿದ್ದೇನೆ. ಪುತ್ತೂರಿನ ಜನತೆ ಏನನ್ನು ಬಯಸುತ್ತಾರೆಯೋ ಅದನ್ನು ನಡೆಸಾಗುವುದು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಮಾಜಿ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಜಿಲ್ಲಾ ಧಾರ್ಮಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪೂಡಾ ಸದಸ್ಯ ಅನ್ವರ್ ಖಾಸಿಂ, ಉದ್ಯಮಿ ಶಿವರಾಮ ಆಳ್ವ, ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಪುಣಚ, ಪೂಡಾ ಮಾಜಿ ಅಧ್ಯಕ್ಷ ಬೆಟ್ಟ ಈಶ್ವರ ಭಟ್, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ವಿಎಚ್‌ಎ ಶಕೂರ್ ಹಾಜಿ, ರವೀಂದ್ರ ನೆಕ್ಕಿಲು, ಕೌಶಲ್ ಪ್ರಸಾದ್ ಶೆಟ್ಟಿ ಬೆಳ್ಳಿಪ್ಪಾಡಿ, ರಮಾನಾಥ ವಿಟ್ಲ, ಗಂಗಾಧರ ಗೌಡ ಕೆಮ್ಮಾರ, ವೇದನಾಥ ಸುವರ್ಣ, ಸುಭಾಸ್ ಬೆಳ್ಳಿಪ್ಪಾಡಿ, ಶರೂನ್ ಸಿಕ್ವೇರಾ, ಶಶಿಕಿರಣ್ ರೈ ನೂಜಿಬೈಲು ಸೇರಿದಂತೆ ಹಲವು ಮಂದಿ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಆಗಮಿಸಿ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು. ಪೂಡಾದ ಸದಸ್ಯ ಕಾರ್ಯದರ್ಶಿ ಗುರುಪ್ರಸಾದ್ ಸ್ವಾಗತಿಸಿ, ವಂದಿಸಿದರು.