ಜಿಲ್ಲೆ

ಪಿಯುಸಿ ಫಲಿತಾಂಶ: ಕೊಡಗಿಗೆ 4ನೇ ಸ್ಥಾನ

ಸುನಿಲ್ ಪೊನ್ನೇಟಿ

ಮಡಿಕೇರಿ:

ಮಂಗಳವಾರ ಪ್ರಕಟವಾದ ಪಿಯುಸಿ ಫಲಿತಾಂಶದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಕೊಡಗು ಈ ಬಾರಿ ಒಂದು ಸ್ಥಾನ ಮುಂದಕ್ಕೆ ಬಂದಿದೆ. ಕಳೆದ ವರ್ಷ ಶೇ. 92.13 ಫಲಿತಾಂಶದೊAದಿಗೆ 5ನೇ ಸ್ಥಾನದಲ್ಲಿದ್ದ ಕೊಡಗು ಈ ವರ್ಷ ಶೇ. 83.84 ಫಲಿತಾಂಶ ಪಡೆದುಕೊಂಡು ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದುಕೊಂಡಿದೆ. ಕಳೆದ ವರ್ಷ ಶೇಕಡವಾರು ಫಲಿತಾಂಶ ಹೆಚ್ಚು ಬಂದಿದ್ದರೂ ಇತರ ಜಿಲ್ಲೆಗಳಿಗೆ ಹೋಲಿಸಿದರೆ 5ನೇ ಸ್ಥಾನದಲ್ಲಿ ಇದ್ದ ಕೊಡಗು ಈ ವರ್ಷ ಶೇಕಡವಾರು ಫಲಿತಾಂಶ ಕಡಿಮೆ ಆಗಿದ್ದರೂ ಇತರ ಜಿಲ್ಲೆಗಳಿಗೆ ಹೋಲಿಸಿದರೆ 4ನೇ ಸ್ಥಾನಕ್ಕೆ ಏರಿದೆ.

ಜಿಲ್ಲೆಯಲ್ಲಿ ಮೂರೂ ವಿಭಾಗಗಳಿಂದ ಒಟ್ಟು 4,697 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 3,938 ವಿದ್ಯಾರ್ಥಿಗಳು ತೇರ್ಗಡೆ ಆಗಿದ್ದಾರೆ. ಇವರಲ್ಲಿ ಪರೀಕ್ಷೆಗೆ ಕುಳಿತಿದ್ದ 2,320 ಬಾಲಕರಲ್ಲಿ 1750 ಬಾಲಕರು ಉತ್ತೀರ್ಣರಾಗಿ 75.43 ರಷ್ಟು ಫಲಿತಾಂಶ ಪಡೆದಿದ್ದಾರೆ. ಹಾಗೆಯೇ ಪರೀಕ್ಷೆಗೆ ಕುಳಿತಿದ್ದ 2,748 ಬಾಲಕಿಯರಲ್ಲಿ 2,333 ಬಾಲಕಿಯರು ಉತ್ತೀರ್ಣರಾಗಿದ್ದು, ಶೇ.84.9 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ 786 ವಿದ್ಯಾರ್ಥಿಗಳ ಪೈಕಿ 516 ವಿದ್ಯಾರ್ಥಿಗಳು ತೇರ್ಗಡೆ ಆಗಿದ್ದು ಶೇ.65.65ರಷ್ಟು ಫಲಿತಾಂಶ ಬಂದಿದೆ. ಮಡಿಕೇರಿ ಸಂತ ಜೋಸೆಫರ ಪಿಯು ಕಾಲೇಜು ವಿದ್ಯಾರ್ಥಿ ಬಿ.ಎಂ. ಅಫಿಯಾ ಶರೀಫ್ 600ಕ್ಕೆ 572 ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕುಶಾಲನಗರ ಕನ್ನಡ ಭಾರÀತಿ ಪಿಯು ಕಾಲೇಜಿನ ಎಂ.ಆರ್. ನವನಿಧನ್ 569, ಕೂಡಿಗೆ ಸರ್ಕಾರಿ ಪಿಯು ಕಾಲೇಜಿನ ಎಸ್. ಸಾಜೀಧಾ 569 ಅಂಕ ಗಳಿಸಿ ಜಿಲ್ಲೆಗೆ ದ್ವಿತೀಯ ಹಾಗೂ ಮದೆಯ ಮದೆ ಮಹದೇಶ್ವರ ಪಿಯು ಕಾಲೇಜಿನ ಕೆ. ಮೇಘಶ್ರೀ 568 ಅಂಕದೊAದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 2,376 ವಿದ್ಯಾರ್ಥಿಗಳ ಪೈಕಿ 2,027 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ. 85.31 ಫಲಿತಾಂಶ ಬಂದಿದೆ. ಸುಂಟಿಕೊಪ್ಪ ಸಂತಮೇರಿ ಪಿಯು ಕಾಲೇಜಿನ ಸಿ.ಎಂ. ಡಿಂಪಲ್ ತಮ್ಮಯ್ಯ 600ಕ್ಕೆ 591 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಗೋಣಿಕೊಪ್ಪಲು ವಿದ್ಯಾನಿಕೇತನ ಪಿಯು ಕಾಲೇಜಿನ ಕೆ.ಎಸ್. ಶಿವಾನಿ 590 ಅಂಕಗಳೊAದಿಗೆ ದ್ವಿತೀಯ, ಇದೇ ಕಾಲೇಜಿನ ವಿ.ಎಸ್. ನೀಕ್ಷಾ ಹಾಗೂ ಸುಂಟಿಕೊಪ್ಪ ಡಿ.ಡಿ. ಸೃಜನಾ 587 ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 1,535 ವಿದ್ಯಾರ್ಥಿಗಳ ಪೈಕಿ 1,395 ವಿದ್ಯಾರ್ಥಿಗಳು ತೇರ್ಗಡೆ ಆಗಿದ್ದು ಶೇ. 90.88 ಫಲಿತಾಂಶ ಬಂದಿದೆ. ಗೋಣಿಕೊಪ್ಪಲು ವಿದ್ಯಾನಿಕೇತನ ಪಿಯು ಕಾಲೇಜಿನ ಟಿ.ವಿ. ವೈಷ್ಣವಿ 600ಕ್ಕೆ 588 ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಪೊನ್ನಂಪೇಟೆ ಹಳ್ಳಿಗಟ್ಟು ಕೂರ್ಗ್ ಪಿಯು ಕಾಲೆಜಿನ ಎ.ಆರ್. ಪನ್ಯ ಪೊನ್ನಮ್ಮ 586 ಅಂಕ ಗಳಿಸಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಇದೇ ಕಾಲೇಜಿನ ಲಿಜೋ ಜೆಮ್ಸ್, ಎಂ.ಪಿ. ಮಮತಾ ಹಾಗೂ ಗೋಣಿಕೊಪ್ಪಲು ವಿದ್ಯಾನಿಕೇತನ ಪಿಯು ಕಾಲೇಜಿನ ಪಿ. ಸಾನಿಕ ಜಸ್ಮಿನ್ 583 ಅಂಕ ಗಳಿಸಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಖಾಸಗಿಯಾಗಿ ಪರೀಕ್ಷೆ ಬರೆದ 250 ವಿದ್ಯಾರ್ಥಿಗಳ ಪೈಕಿ 121 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 48.40 ಫಲಿತಾಂಶ ಬಂದಿದ್ದರೆ, 121 ಪುನರಾವರ್ತಿತ ಅಭ್ಯರ್ಥಿಗಳಲ್ಲಿ 24 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ. 19.83 ಫಲಿತಾಂಶ ಬಂದಿದೆ.